Advertisement
ಮುಂಬಯಿಯ ದೀಪಕ್ ಫರ್ಟಿಲೈಸರ್ಸ್ ಮತ್ತು ರಾಷ್ಟ್ರೀಯ ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಸೇರಿದಂತೆ ಹಲವು ಕಂಪೆನಿಗಳು ಮಿಥನಾಲ್ ಉತ್ಪಾದಿಸಬಲ್ಲವು. ಈಗಾಗಲೇ ವೋಲ್ವೋ ಕಂಪೆನಿಯು ವಿಶೇಷ ಇಂಜಿನ್ ತಯಾರಿಸಿದ್ದು, ಇದು ಮಿಥನಾಲ್ ಬಳಸಿ ಚಲಿಸಬಲ್ಲದು ಮತ್ತು ಸ್ಥಳೀಯವಾಗಿ ಉತ್ಪಾದಿಸಿದ ಮಿಥನಾಲ್‌ಅನ್ನೇ ಇದರಲ್ಲಿ ಉಪಯೋಗಿಸಬಹುದಾಗಿದೆ. ಪ್ರಾಯೋಗಿಕ ವಾಗಿ 25 ಬಸ್‌ಗಳನ್ನು ಈ ಇಂಜಿನ್ ಬಳಸಿ ಓಡಿಸಲು ನಿರ್ಧರಿಸಲಾಗಿದೆ.
ಮುಂಬಯಿನ ಜೆಎನ್‌ಪಿಟಿ ಎಸ್‌ಇಝೆಡ್‌ನಲ್ಲಿ 24 ಕಂಪೆನಿಗಳು ಹೂಡಿಕೆ ಮುಂದೆ ಬಂದಿದ್ದು, ಒಟ್ಟು 60 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಗಡ್ಕರಿ ಇದೇ ವೇಳೆ ಹೇಳಿದ್ದಾರೆ. ಈ ಹೂಡಿಕೆಯಿಂದಾಗಿ 1.50 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈಗಾ ಗಲೇ ಮೊಬೈಲ್ ತಯಾರಿಕೆ ಕಂಪೆನಿ ಫಾಕ್ಸ್‌ಕಾನ್ ತನ್ನ ಫ್ಯಾಕ್ಟರಿ ಸ್ಥಾಪಿಸಲು ಬಯಸಿದೆ ಎಂದು ಹೇಳಲಾಗಿತ್ತು. ಸಾಗರಮಾಲಾ ಯೋಜನೆಯಡಿಯಲ್ಲಿ 2 ಲಕ್ಷ ಕೋಟಿ ರೂ. ಮೊತ್ತದ ಕಾಮಗಾರಿ ಚಾಲ್ತಿಯಲ್ಲಿದೆ. ಇನ್ನೂ ಹಲವು ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.