ನವ ದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗುರುವಾರ (ಏಪ್ರಿಲ್ 8) ಪೆಟ್ರೋಲ್, ಡೀಸೆಲ್ ದರಗಳಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 90.56 ರೂ. ಡೀಸೆಲ್ ದರ ಸ್ಥಿರವಾಗಿ ಪ್ರತಿ ಲೀಟರ್‌ಗೆ 80.87 ರೂ. ನಷ್ಟಿದೆ.
ಓದಿ : ಫೋರ್ಬ್ಸ್ ನ ಬಿಲಿಯನೇರ್ಸ್ 35ನೇ ವಾರ್ಷಿಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ ಭಾರತ
ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ..?
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 90.56 ರೂ. ಮತ್ತು ಡೀಸೆಲ್ ದರ 80.87 ರೂ. ಇದ್ದರೇ, ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90.77 ರೂ. ಮತ್ತು ಡೀಸೆಲ್ ದರ 83.75 ರೂ. ಆಗಿದೆ. ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 96.98 ರೂ. ಮತ್ತು ಡೀಸೆಲ್ ದರ 887.96 ರೂ. ಇದೆ. ಹೈದ್ರಾಬಾದ್‌ನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 94.16 ರೂ. ಮತ್ತು ಡೀಸೆಲ್ ದರ 88.20 ರೂ. ಆದರೆ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 93.59 ರೂ. ಮತ್ತು ಡೀಸೆಲ್ ದರ 85.75 ರೂ. ಹಾಗೂ ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 92.58 ರೂ. ಮತ್ತು ಡೀಸೆಲ್ ದರ 85.88 ರೂ. ಇದೆ.
ಓದಿ : ಬೆಂಗಳೂರು ವಿಮಾನ ನಿಲ್ದಾಣಕ್ಕೂ ತಟ್ಟಿದ ಮುಷ್ಕರದ ಬಿಸಿ