Advertisement
ಇದನ್ನೂ ಓದಿ:ಎರಡು ಸ್ಥಾನಕ್ಕೆ ಮೂವರ ಸ್ಪರ್ಧೆ: ಟೆಸ್ಟ್ ತಂಡದಲ್ಲಿ ಪೂಜಾರ- ರಹಾನೆ ಸ್ಥಾನ ತುಂಬುವವರು ಯಾರು?
Related Articles
Advertisement
110 ಡಾಲರ್‌ಗೆ ಏರಿಕೆಯಾದ ಕಚ್ಚಾ ತೈಲ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ದಿನದಿಂದ ದಿನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗು ತ್ತಲೇ ಇದೆ. ಬುಧವಾರ ಮತ್ತೆ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಮೇಲೆ 5.24 ಡಾಲರ್ ಹೆಚ್ಚಳ ವಾಗಿ, 108.60 ಡಾಲರ್‌ಗೆ ಏರಿಕೆಯಾಯಿತು. ಇದು ಬೆಂಚ್ ಮಾರ್ಕ್ ಯುಎಸ್ ಕಚ್ಚಾ ತೈಲದ ದರ. ಆದರೆ, ಬ್ರೆಂಟ್ ಕಚ್ಚಾ ತೈಲದ ದರ 5.43 ಡಾಲರ್ ಹೆಚ್ಚಳವಾಗಿ, 110.40 ಡಾಲರ್‌ಗೆ ಏರಿಕೆಯಾಯಿತು.
ಇದರ ನಡುವೆಯೇ ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ 31 ಸದಸ್ಯರ ಮಂಡಳಿ ಮಂಗಳ ವಾರವಷ್ಟೇ ಮೀಸಲಾಗಿ ಇರಿಸಲಾಗಿರುವ ಕಚ್ಚಾ ತೈಲದಲ್ಲಿ 60 ದಶಲಕ್ಷ ಬ್ಯಾರೆಲ್ ಅನ್ನು ಬಿಡು ಗಡೆ ಮಾಡಲು ಒಪ್ಪಿಗೆ ನೀಡಿದೆ. ಜತೆಗೆ ಅಮೆರಿಕವೂ ಮೀಸಲಾಗಿಟ್ಟಿರುವ ತೈಲದಲ್ಲಿ 30 ದಶ ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದರ ನಡು ವೆಯೂ ತೈಲ ಬೆಲೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಷೇರುಪೇಟೆ ಕುಸಿತ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಜಗತ್ತಿನ ಎಲ್ಲಾ ಷೇರುಮಾರುಕಟ್ಟೆಗಳು ಕುಸಿತ ಕಂಡಿವೆ. ಇದಕ್ಕೆ ಪೂರಕವಾಗಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲೂ ಭಾರೀ ಪ್ರಮಾಣದ ಕುಸಿತವಾಗಿದೆ. ಬುಧವಾರ ಮಧ್ಯಂತರದಲ್ಲಿ 1,200 ಅಂಕಗಳಷ್ಟು ಸೆನ್ಸೆಕ್ಸ್ ಕುಸಿದಿತ್ತು. ನಿಫ್ಟಿ ಕೂಡ 187.95 ಅಂಕಗಳಷ್ಟು ಕುಸಿತವಾಗಿತ್ತು. ಆದರೆ, ಸೆನ್ಸೆಕ್ಸ್ ನಲ್ಲಿ ಮಧ್ಯಾಹ್ನದ ನಂತರ ಕೊಂಚ ಏರಿಕೆಯಾಗಿ ದಿನದಂತ್ಯಕ್ಕೆ 778.38 ಅಂಕಗಳ ಕುಸಿತದೊಂದಿಗೆ ವಹಿವಾಟು ಅಂತ್ಯವಾಯಿತು. ಅಂದರೆ, 55,468.90 ಸೂಚ್ಯಂಕಗಳಿಗೆ ವಹಿ ವಾಟು ಮುಗಿಸಿತು. ಫ್ಟಿ 16,605.95 ಅಂಕಗಳಿಗೆ ವಹಿವಾಟು ಮುಗಿಸಿತು. ಬುಧವಾರ ಹೆಚ್ಚು ನಷ್ಟ ಅನುಭವಿಸಿದ್ದು ಮಾರುತಿ ಸುಜುಕಿ ಷೇರುಗಳು. ಶೇ.6ರಷ್ಟು ಕುಸಿತವಾಯಿತು. ಉಳಿದಂತೆ ಡಾ.ರೆಡ್ಡೀಸ್, ಏಷಿಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ಸಿ ಟ್ವಿನ್ಸ್, ಅಲ್ಟ್ರಾ ಟೆಕ್ ಸಿಮೆಂಟ್‌ನಲ್ಲಿಯೂ ಶೇ.5.14ರಷ್ಟು ಕುಸಿತವಾಯಿತು.
ರೂಪಾಯಿ 44 ಪೈಸೆ ಕುಸಿತಇನ್ನು ಡಾಲರ್ ವಿರುದ್ಧ ರೂಪಾಯಿ ಮೌಲ್ಯವೂ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಫಾರೆಕ್ಸ್ ಟ್ರೇಡಿಂಗ್ ನಲ್ಲಿ 44 ಪೈಸೆ ಕುಸಿತವಾಗಿದ್ದು, ದಿನದಂತ್ಯಕ್ಕೆ ಪ್ರತಿ ಡಾಲರ್ ಮುಂದೆ ಭಾರತೀಯ ರೂಪಾಯಿ ಮೌಲ್ಯ 75.77ಕ್ಕೆ ನಿಂತಿತು. ಬುಧವಾರ ಬೆಳಗ್ಗೆ ವಿದೇಶಿ ವಿನಿಮಯ ಮಾರುಕ ಟ್ಟೆಯಲ್ಲಿ ರೂಪಾಯಿ ಮೌಲ್ಯ 75.78ರಿಂದ ಆರಂಭವಾಯಿತು. ಆದರೆ, ಮಧ್ಯಂತರದಲ್ಲಿ 75.86 ರೂ.ಗೆ ಕುಸಿಯಿತು. ದಿನದಿಂತ್ಯಕ್ಕೆ 75.77 ರೂ.ಗೆ ಅಂತ್ಯವಾಯಿತು. ಚಿನ್ನದ ದರ ಏರಿಕೆ
ಅತ್ತ ಚಿನಿವಾರ ಮಾರುಕಟ್ಟೆಯಲ್ಲೂ ಬಂಗಾರದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬುಧವಾರ ನವದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರ 1,202 ರೂ.ನಷ್ಟು ಏರಿಕೆಯಾಯಿತು. ಅದೇ ಬೆಳ್ಳಿ ದರ, ಪ್ರತಿ ಕೆಜಿಗೆ 2,148 ರೂ.ಗೆ ಏರಿಕೆಯಾಯಿತು.
ಮುಖ್ಯಾಂಶಗಳು
10 ಗ್ರಾಂ ಚಿನ್ನದ ದರ – 51,889 ರೂ.
1 ಕೆಜಿ ಬೆಳ್ಳಿ ದರ – 67,956 ರೂ.