ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ, ಇಂದು ಕೂಡ (ಫೆ.17) ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಳವಾಗಿದೆ. ಕಳೆದ 10 ದಿನಗಳಲ್ಲಿ 8ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದ್ದು ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟಗಾರರ ಮಾಹಿತಿಯನ್ವಯ, ಪ್ರಮುಖ ನಗರಗಳಲ್ಲಿ ಡೀಸೆಲ್ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದೆ.
ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 89.54 ರೂ. ಹಾಗೂ ಡಿಸೇಲ್ ದರ 75.95 ರೂ. ತಲುಪಿದೆ. ಸಾಗಣೆ ವೆಚ್ಚ ಮತ್ತು ವ್ಯಾಟ್ ತೆರಿಗೆ ಮೊದಲಾದ ಕಾರಣದಿಂದ ರಾಜ್ಯಗಳಲ್ಲಿ ತೈಲ ದರದಲ್ಲಿ ವ್ಯತ್ಯಾಸವಿರುತ್ತದೆ.
ಇದನ್ನೂ ಓದಿ: ಎಚ್‌ಡಿಕೆ, ಸಿದ್ದು ದೇಣಿಗೆ ಕಿಡಿ : ಪೇಜಾವರ ಶ್ರೀ; ಬಿಜೆಪಿ, ಆರೆಸ್ಸೆಸ್ ನಾಯಕರಿಂದ ಆಕ್ರೋಶ
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.00 ರೂ. ಕೋಲ್ಕತಾದಲ್ಲಿ 90.78 ರೂ., ಚೆನ್ನೈನಲ್ಲಿ 91.68 ರೂ. ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 86.98 ರೂ, ಕೋಲ್ಕತಾದಲ್ಲಿ ಡೀಸೆಲ್ ಬೆಲೆ 83.54 ರೂ., ಚೆನ್ನೈನಲ್ಲಿ ಡೀಸೆಲ್ ಬೆಲೆ 85.01 ರೂ. ಇದೆ
ಗಮನಾರ್ಹ ಸಂಗತಿಯೆಂದರೆ ಮೇಘಾಲಯದಲ್ಲಿ ವ್ಯಾಟ್ ಕಡಿಮೆ ಮಾಡುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಚಿಲ್ಲರೆ ಮಾರಾಟ ಬೆಲೆ 5 ರೂ. ಇಳಿಕೆ ಮಾಡಲಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಕೆ. ಸಂಗ್ಮಾ ತಿಳಿಸಿದ್ದಾರೆ. ಇದರಿಂದ ಪ್ರತಿ ಲೀಟರ್‌ಗೆ 91.26 ರೂ. ಇದ್ದ ಪೆಟ್ರೋಲ್ ದರ ಈಗ 85.86 ರೂ ಆಗಲಿದೆ. 86.23ರೂ. ಇದ್ದ ಡೀಸೆಲ್ ದರ 79.13 ರೂ. ಆಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಮಾತಿಗಿಂತ ಮೌನವೇ ಲೇಸು. ಆಕಸ್ಮಿಕ ಧನಾನುಕೂಲ: ಹೇಗಿದೆ ನಿಮ್ಮ ಇಂದಿನ ಗ್ರಹಬಲ ?