Advertisement
ಕಳೆದ ವಾರಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 14 ಪೈಸೆ ಕಡಿತಗೊಳಿಸಿದ್ದವು.
Related Articles
Advertisement
ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 92 ರೂಪಾಯಿ 43 ಪೈಸೆ ಆಗಿದ್ದರೇ, ಪ್ರತಿ ಲೀಟರ್ ಡೀಸೆಲ್ ದರ 85 ರೂಪಾಯಿ 75 ಪೈಸೆ ಇದೆ.
ಓದಿ : ಆ್ಯಂಬುಲೆ ನ್ಸ್ ನಿರ್ವಹಣೆಗೆ ಬಿಎಂಟಿಸಿ ತನಿಖಾದಳ ಸಾಥ್
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ಗಮನಿಸಿದಾಗ 90 ರೂಪಾಯಿ 20 ಆಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 83 ರೂಪಾಯಿ 61 ಪೈಸೆ ಇದೆ.
ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಅನ್ನು 93 ರೂಪಾಯಿ 43 ಪೈಸೆ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 85 ರೂಪಾಯಿ 60 ಪೈಸೆ ಇದೆ.
ಇನ್ನು, ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 88 ರೂಪಾಯಿ 72 ಪೈಸೆ ಇದ್ದರೆ. ಪ್ರತಿ ಲೀಟರ್ ಡೀಸೆಲ್ ಬೆಲೆ 81 ರೂಪಾಯಿ 13 ಪೈಸೆ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಂಡಿರುವ ಕಾರಣದಿಂದಾಗಿ ಏಪ್ರಿಲ್ ತಿಂಗಳ ಮೊದಲು 15 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ದರವನ್ನು ಬದಲಾವಣೆ ಮಾಡಿರಲಿಲ್ಲ. 15 ದಿನಗಳ ನಂತರ ಗುರುವಾರ ಮೊದಲಬಾರಿಗೆ ಕಡಿತ ಕಂಡಿತು. ಅದಕ್ಕೂ ಮೊದಲು ಮಾರ್ಚ್ ತಿಂಗಳ ಕೊನೆಯ 30ನೇ ತಾರೀಕಿನಂದು ಕಡಿತಗೊಳಿಸಲಾಗಿತ್ತು. ಆದರೂ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಇದೆ.
ಓದಿ : ಲಾಕ್‌ಡೌನ್ ನಡುವೆ ಸರಳವಾಗಿ ನಡೆದ ರಾಜ್ ಕುಮಾರ್ ಹುಟ್ಟುಹಬ್ಬ