Advertisement
ರಷ್ಯಾ -ಉಕ್ರೇನ್ ಯುದ್ಧದ ವೇಳೆ ಅಂತರ್ ರಾಷ್ಟ್ರೀಯ ತೈಲ ಬೆಲೆ ಜಿಗಿತದ ನಡುವೆಯೂ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ನಾಲ್ಕು ತಿಂಗಳ ಕಾಲ ದರವನ್ನು ಸ್ಥಿರವಾಗಿರಿಸಿದ್ದರಿಂದ ಆದ ನಷ್ಟವನ್ನು ಸರಿದೂಗಿಸಲು ತೈಲ ಕಂಪೆನಿಗಳು ಮುಂದಾಗಿವೆ.ಅಂತರ್ ರಾಷ್ಟ್ರೀಯ ಕಚ್ಚಾ ತೈಲ ಬೆಲೆ 13 ವರ್ಷಗಳ ಬಳಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಪ್ರತಿ ಬ್ಯಾರೆಲ್‌ಗೆ 140 ಡಾಲರ್ ರಂತೆ ಮಾರಾಟವಾಗುತ್ತಿದೆ.
Related Articles
Advertisement
ಸೋಮವಾರ ದೆಹಲಿಯಲ್ಲಿ ಪೆಟ್ರೋಲ್ ದರ 95.41ರೂ. ಇದ್ದರೆ ಡೀಸೆಲ್ ದರ 86.67 ರೂ. ಇದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 104.67 ರೂ. ಇದ್ದರೆ ಡೀಸೆಲ್ ದರ 89.79 ರೂ. ಇದೆ.ಮುಂಬಯಿಯಲ್ಲಿ ಪೆಟ್ರೋಲ್ ದರ 109.98 ರೂ. ಇದ್ದರೆ ಡೀಸೆಲ್ ದರ 94.14 ರೂ. ಇದೆ.ಬೆಂಗಳೂರಿನಲ್ಲಿ ಪೆಟ್ರೋಲ್ ದರ 100.58 ರೂ. ಇದ್ದರೆ ಡೀಸೆಲ್ ದರ 85.01ರೂ. ಇದೆ.