Advertisement

9ನೇ ದಿನ ತೈಲ ಬೆಲೆಯೇರಿಕೆ ; ಒಟ್ಟಾರೆ ಪೆಟ್ರೋಲ್‌, ಡೀಸೆಲ್‌ ತಲಾ 5 ರೂ. ಏರಿಕೆ

01:39 AM Jun 16, 2020 | Hari Prasad |

ಹೊಸದಿಲ್ಲಿ: ತೈಲ ಬೆಲೆಯೇರಿಕೆಯ ನಾಗಾಲೋಟಕ್ಕೆ ತಡೆಯೇ ಇಲ್ಲವಾಗಿದೆ.

Advertisement

ಲಾಕ್‌ಡೌನ್‌ ಕಾರಣ ಸತತ 82 ದಿನಗಳ ಕಾಲ, ದೈನಂದಿನ ಬೆಲೆ ಪರಿಷ್ಕರಣೆಯನ್ನು ಸರಕಾರಿ ತೈಲ ಕಂಪೆನಿಗಳು ನಿಲ್ಲಿಸಿದ್ದವು.

ಮೊನ್ನೆ ಜೂ.7ರಿಂದ ಈ ಪ್ರಕ್ರಿಯೆ ಶುರು ಮಾಡಿದ ಅನಂತರ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ.

ಇದೀಗ ಸತತ 9ನೇ ದಿನ ಏರಿಕೆ ಮುಂದುವರಿದಿದೆ. ಪೆಟ್ರೋಲ್‌ ಬೆಲೆ ದಿಲ್ಲಿಯಲ್ಲಿ ಲೀ.ಗೆ 48, ಡೀಸೆಲ್‌ ಲೀ.ಗೆ 59 ಪೈಸೆ ಹೆಚ್ಚಳವಾಗಿದೆ.

ಇದರ ಪರಿಣಾಮ ಬೆಂಗಳೂರಿನಲ್ಲಿ ಸೋಮವಾರ ಪೆಟ್ರೋಲ್‌ ಬೆಲೆ ಲೀ.ಗೆ 78.73 ರೂ.ಗೇರಿದೆ. ಇನ್ನು ಡೀಸೆಲ್‌ ಬೆಲೆ 70.95 ರೂ.ಗೆ ಮುಟ್ಟಿದೆ.

Advertisement

ಅಲ್ಲಿಗೆ ಎರಡೂ ತೈಲಗಳ ಬೆಲೆಯಲ್ಲಿ 5 ರೂ. ಹೆಚ್ಚಳವಾಗಿದೆ. ಬಹುಶಃ ಇಲ್ಲಿಗೆ ಬೆಲೆಯೇರಿಕೆ ನಿಲ್ಲಬಹುದೆಂದು ಅಂದಾಜಿಸಲಾಗಿದೆ.

ಲಾಕ್‌ಡೌನ್‌ ಬಿಗಿಯನ್ನು ಕೇಂದ್ರ ಸರಕಾರ ಸಡಿಲಗೊಳಿಸಿದಾಗಲೇ ಈ ರೀತಿಯ ಏರಿಕೆಯೊಂದರ ಸುಳಿವು ಸಿಕ್ಕಿತ್ತು. ವಾಹನಗಳು ಮತ್ತೆ ರಸ್ತೆಗಳಿಯುತ್ತಿದ್ದಂತೆಯೇ 5 ರೂ.ವರೆಗೆ ಹಂತ ಹಂತವಾಗಿ ಬೆಲೆ ಏರಿಸಬಹುದೆಂದು ಹೇಳಲಾಗಿತ್ತು. ಅದೀಗ ಸತ್ಯವಾಗಿದೆ!

ಸೌದಿ ಅರಾಮ್ಕೊದಿಂದ ಏಷ್ಯಾದ 5 ಕಂಪನಿಗಳಿಗೆ ರಫ್ತುಕಡಿತ
ವಿಶ್ವದಲ್ಲೇ ಬೃಹತ್‌ ಪ್ರಮಾಣದಲ್ಲಿ ತೈಲ ರಫ್ತು ಮಾಡುವ ಸೌದಿ ಅರಾಮ್ಕೊ ಕಂಪೆನಿ, ಜುಲೈನಲ್ಲಿ ಏಷ್ಯಾದ 5 ಕಂಪೆನಿಗಳಿಗೆ ಕಚ್ಚಾ ತೈಲ ಪೂರೈಕೆಯನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ.

ಚೀನದಂತಹ ರಾಷ್ಟ್ರಗಳ ಸಂಸ್ಕರಣಾ ಕೇಂದ್ರಗಳಲ್ಲಿ ಕಾಣಿಸುವ, ಮಧ್ಯಮ ಮತ್ತು ಉನ್ನತ ಹಂತದ ಕಚ್ಚಾ ತೈಲದ ಪೂರೈಕೆ ಕಡಿಮೆಯಾಗಲಿದೆ.

ಅದರಲ್ಲೂ ನಾಲ್ಕು ಕಂಪೆನಿಗಳಿಗೆ ಸ್ವಲ್ಪ ಮಾತ್ರ ಕಡಿತವಾಗಲಿದೆ. ತೈಲಪೂರೈಕೆ ರಾಷ್ಟ್ರಗಳ ನಡುವೆ ನಡೆದ ಮಾತುಕತೆಯ ನಂತರ ಇಂತಹ ನಿರ್ಧಾರ ಮಾಡಲಾಗಿದೆ. ಜುಲೈನಲ್ಲಿ ಕಚ್ಚಾತೈಲದ ಬೆಲೆಯೂ ಏರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next