ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರವೂ (ಏಪ್ರಿಲ್ 06) ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 80 ಪೈಸೆಯಷ್ಟು ಏರಿಕೆ ಮಾಡಿದ್ದು, ಇದರೊಂದಿಗೆ ಕಳೆದ 16 ದಿನಗಳಲ್ಲಿ 14 ಬಾರಿ ಏರಿಕೆ ಮಾಡಿದಂತಾಗಿದೆ. 16 ದಿನಗಳಲ್ಲಿ ಪ್ರತಿ ಲೀಟರ್ ಗೆ ಹತ್ತು ರೂಪಾಯಿ ಹೆಚ್ಚಳವಾಗಿದೆ.
ಇದನ್ನೂ ಓದಿ:ಲಂಕಾ ಸರಕಾರಕ್ಕೆ ಕುತ್ತು; ಅಲ್ಪಮತಕ್ಕೆ ಕುಸಿದ ಬೆಂಬಲ ;41 ಸಂಸದರು ಸಂಸತ್‌ಗೆ ಗೈರು
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 91 ಪೈಸೆಯಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.16 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಬೆಲೆ 85 ಪೈಸೆಯಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 94.86 ರೂಪಾಯಿಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 105.41 ರೂಪಾಯಿಯಾಗಿದ್ದು, ಡೀಸೆಲ್ ಲೀಟರ್ ಬೆಲೆ 96.77 ರೂಪಾಯಿಗೆ ಹೆಚ್ಚಳವಾಗಿದೆ. ಮುಂಬಯಿಯಲ್ಲಿ ಪೆಟ್ರೋಲ್ ಲೀಟರ್ ಬೆಲೆ 120.51 ರೂಪಾಯಿ, ಡೀಸೆಲ್ ಬೆಲೆ 104.77 ರೂಪಾಯಿಯಾಗಿದೆ.
ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೇವಲ ಶೇ.5ರಷ್ಟು ಮಾತ್ರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ (ಏ.5) ಸಮರ್ಥಿಸಿಕೊಂಡಿದ್ದರು.