Advertisement

ಪೆಟ್ರೋಲ್‌ 45 ರೂ.ಗೆ ನೀಡಲು ಸಾಧ್ಯ: ವೀರಪ್ಪ ಮೊಯ್ಲಿ

12:37 AM Oct 21, 2021 | Team Udayavani |

ಕಾರ್ಕಳ: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನಿಯಂತ್ರಣ ಸಾಧ್ಯವಿದೆ. ನಾನು ಪೆಟ್ರೋಲಿಯಂ ಸಚಿವನಾಗಿದ್ದಾಗ ಲೀ.ಗೆ 45 ರೂ. ಇತ್ತು. ಆಗ ಕ್ರೂಡ್‌ ಆಯಿಲ್‌ ಗರಿಷ್ಠ ಮಟ್ಟದಲ್ಲಿತ್ತು. ಸಬ್ಸಿಡಿಯಿಂದಾಗಿ 350 ರೂ. ಗೆ ಗ್ಯಾಸ್‌ ಸಿಲಿಂಡರ್‌ ಸಿಗುತ್ತಿತ್ತು. ಈಗಲೂ ಪೆಟ್ರೋಲ್‌ ಲೀಟರ್‌ಗೆ 35ರಿಂದ 45 ರೂ.ಗಳಿಗೆ ನೀಡಲು ಕೇಂದ್ರಕ್ಕೆ ಸಾಧ್ಯವಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

Advertisement

ಕಾರ್ಕಳದಲ್ಲಿ ಬುಧವಾರ ಪತ್ರ
ಕರ್ತರ ಜತೆ ಮಾತನಾಡಿದ ಅವರು 2002ರಲ್ಲಿ ಬಾಂಡ್‌ ಪ್ರಕ್ರಿಯೆಯನ್ನು ವಾಜಪೇಯಿ ಸರಕಾರ ತಂದಿತ್ತು. ಆದರೆ ನಮ್ಮ ಸರಕಾರ ಬಂದ ಎರಡು ಮೂರು ವರ್ಷ ಮಾತ್ರ ಬಾಂಡ್‌ ಇತ್ತು. ಹಿಂದಿನ ಕಾಂಗ್ರೆಸ್‌ ಸರಕಾರ ಇದ್ದಾಗ ಮಾಡಿದ ಒಂದು ರೂಪಾಯಿ ಬಾಂಡ್‌ ಹಣವನ್ನು ಸಹ ಈ ಸರಕಾರ ವಾಪಸ್‌ ಕೊಟ್ಟಿಲ್ಲ ಎಂದರು.

ಗಾಂಧಿ ನಡಿಗೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸೂಚನೆಯಂತೆ ಪಕ್ಷ ಸಂಘಟನೆ ಗುರಿಯೊಂದಿಗೆ ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಅ.26ರಿಂದ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ದೀಪಾವಳಿ ಬಳಿಕ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಳಚರಂಡಿ ಯೋಜನೆ ನಡೆದದ್ದೇ ಕಾರ್ಕಳದಲ್ಲಿ. ಈಗ ನಡೆಯುತ್ತಿರುವ ಒಳಚರಂಡಿಯಲ್ಲಿ ಲೀಕೇಜ್‌ ಆಗಿರುವ ಆರೋಪವಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದವರು ಆಗ್ರಹಿಸಿದರು.

ಇದನ್ನೂ ಓದಿ:ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

Advertisement

ಗೋಹತ್ಯೆ, ಮತಾಂತರ ಕೃತಕ
ಗೋಹತ್ಯೆ, ಮತಾಂತರ, ಬಲ ತ್ಕಾರಗಳನ್ನು ನಿಯಂತ್ರಿಸುವ ಕಾನೂನು ಸರಕಾರದ ಕೈಯಲ್ಲಿದೆ. ಇದು ಅವರ ನಿಷ್ಕ್ರಿಯತೆಯನ್ನು ತೋರಿಸುತ್ತದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಮತಾಂತರದ ಹಾವಳಿಯೇ ಇರಲಿಲ್ಲ. ಈಗ ಇದೆ ಅಂದರೆ ಅದು ವೋಟ್‌ ಬ್ಯಾಂಕ್‌ನ ಕೃತಕ ಸೃಷ್ಟಿ ಎಂದರು.

ಅಭ್ಯರ್ಥಿ ಯಾರೆನ್ನುವುದಕ್ಕೆ ತೆರೆ
ಗಾಂಧಿ ನಡಿಗೆ ಮೂಲಕವೇ ಕಾರ್ಕಳದ ಕಾಂಗ್ರೆಸ್‌ ಅಭ್ಯರ್ಥಿ ಜನಅಭಿಪ್ರಾಯದ ಮೂಲಕ ಹೊರಹೊಮ್ಮಲಿದ್ದಾರೆ ಎನ್ನುವ ಮೂಲಕ ಅವರು ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕೊಡವೂರು, ಸುಧಾಕರ ಕೋಟ್ಯಾನ್‌, ನೀರೆ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಬಿಪಿನ್‌ಚಂದ್ರಪಾಲ್‌ ನಕ್ರೆ, ಮಹಿಳಾ ಕಾಂಗ್ರೆಸ್‌ನ ಅನಿತಾ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next