Advertisement

ಇಂದು ಸಹ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ

08:49 PM Oct 10, 2021 | Team Udayavani |

ನವದೆಹಲಿ: ದೇಶದಲ್ಲಿ ಭಾನುವಾರವೂ ಪೆಟ್ರೋಲ್‌, ಡೀಸೆಲ್‌ ದರ ಪ್ರತಿ ಲೀಟರ್‌ಗೆ ಕ್ರಮವಾಗಿ 30, 35 ಪೈಸೆ ಏರಿಕೆಯಾಗಿದೆ.

Advertisement

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ 37 ಪೈಸೆ ಹೆಚ್ಚಳವಾಗಿ 98.52 ರೂ., ಪ್ರತಿ ಲೀಟರ್‌ ಪೆಟ್ರೋಲ್‌ಗೆ 31 ಪೈಸೆ ಏರಿಕೆಯಾಗಿ 107. 77 ರೂ. ಏರಿಕೆಯಾಗಿದೆ.

ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿ ಪ್ರತಿ ಲೀಟರ್‌ಗೆ ಡೀಸೆಲ್‌ಗೆ 100 ರೂ. ದಾಟಿದೆ.

ನವದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ದಾಖಲೆಯ 92.82 ರೂ., ಡೀಸೆಲ್‌ಗೆ 100.66 ರೂ., ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 110.12 ರೂ., ಡೀಸೆಲ್‌ಗೆ 100.66 ರೂ. ಆಗಿದೆ.

ಇದನ್ನೂ ಓದಿ:ಸ್ವಾಮಿ ವಿವೇಕಾನಂದರ ಕನಸು ನನಸು ಮಾಡುತ್ತಿರುವ ಮೋದಿ: ನಳಿನ್‍ಕುಮಾರ್ ಕಟೀಲ್

Advertisement

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next