Advertisement

ಜಿರಿ ವಾನೆಕ್‌ ಜತೆ ಪೆಟ್ರಾ ಕ್ವಿಟೋವಾ ನಿಶ್ಚಿತಾರ್ಥ

11:50 PM Aug 24, 2022 | Team Udayavani |

ಲಂಡನ್‌: ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾ ಅವರು ಬುಧವಾರ ಆಲ್‌ ಇಂಗ್ಲೆಂಡ್‌ ಲಾನ್‌ ಟೆನಿಸ್‌ ಕ್ಲಬ್‌ನಲ್ಲಿ ಮತ್ತೊಂದು ಸಂತೋಷದ ಸುದ್ದಿಯನ್ನು ನೀಡಿ ಸ್ಮರಣೀಯಗೊಳಿಸಿದರು. ಅವರು “ವಿಶೇಷ ಸ್ಥಳದಲ್ಲಿ’ ತಮ್ಮ ತರಬೇತುದಾರ ಜಿರಿ ವಾನೆಕ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಘೋಷಿಸಿದರು.

Advertisement

2011 ಮತ್ತು 2014ರಲ್ಲಿ ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿಗಳನ್ನು ಗೆದ್ದಿರುವ ಕ್ವಿಟೋವಾ, ಸಿನ್ಸಿನಾಟಿಯಲ್ಲಿ ನಡೆದ ಡಬ್ಲ್ಯುಟಿಎ ಟೂರ್‌ 1000 ಕೂಟದಲ್ಲಿ ರನ್ನರ್‌ ಅಪ್‌ ಸ್ಥಾನ ಗಳಿಸಿದ್ದರು.

“ಸಂತೋಷದ ಸುದ್ದಿಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇವೆ. ಎಂದು 32ರ ಹರೆಯದ ಕ್ವಿಟೋವಾ ಹೇಳಿದರು. 2016ರ ನವೆಂಬರ್‌ನಿಂದ ವಾನೆಕ್‌ ಅವರು ಕ್ವಿಟೋವಾ ಅವರ ತರಬೇತುದಾರರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next