Advertisement

“ಲೇಕರ್‌ ಟೆಸ್ಟ್‌’ಪಂದ್ಯದ ಶತಕವೀರ ಪೀಟರ್‌ ರಿಚರ್ಡ್‌ಸನ್‌ ನಿಧನ

03:45 AM Feb 19, 2017 | |

ಲಂಡನ್‌: ಐತಿಹಾಸಿಕ “ಲೇಕರ್‌ ಟೆಸ್ಟ್‌’ ಪಂದ್ಯದದಲ್ಲಿ ಶತಕ ಬಾರಿಸಿದ ಇಂಗ್ಲೆಂಡಿನ ಮಾಜಿ ಆರಂಭಕಾರ ಪೀಟರ್‌ ರಿಚರ್ಡ್‌ಸನ್‌ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

Advertisement

ರಿಚರ್ಡ್‌ಸನ್‌ 1956-63ರ ಅವಧಿಯಲ್ಲಿ ಇಂಗ್ಲೆಂಡ್‌ ಪರ 34 ಟೆಸ್ಟ್‌ಗಳನ್ನಾಡಿದ್ದರು. ಖ್ಯಾತ ಆರಂಭಕಾರ ಲೆನ್‌ ಹಟನ್‌ ನಿವೃತ್ತರಾದ ಬಳಿಕ ರಿಚರ್ಡ್‌ಸನ್‌ ಇಂಗ್ಲೆಂಡ್‌ ತಂಡಕ್ಕೆ ಆಯ್ಕೆಯಾಗಿದ್ದರು. 1956ರ ಆ್ಯಶಸ್‌ ಸರಣಿಯ ನಾಟಿಂಗಂ ಟೆಸ್ಟ್‌ ಪಂದ್ಯದಲ್ಲಿ 81 ಹಾಗೂ 73 ರನ್‌ ಬಾರಿಸಿ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದರು.

ಇದೇ ಸರಣಿಯ ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ರಿಚರ್ಡ್‌ಸನ್‌ ಮೊದಲ ಶತಕ ಬಾರಿಸಿದರು (104). ಕಾಲಿನ್‌ ಕೌಡ್ರಿ ಜತೆಗೂಡಿ ಆರಂಭಿಕ ವಿಕೆಟಿಗೆ 174 ರನ್‌ ಪೇರಿಸಿದ್ದರು. ಈ ಪಂದ್ಯದಲ್ಲೇ ಇಂಗ್ಲೆಂಡಿನ ಸ್ಪಿನ್ನರ್‌ ಜಿಮ್‌ ಲೇಕರ್‌ 19 ವಿಕೆಟ್‌ ಉಡಾಯಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಇಂಗ್ಲೆಂಡ್‌ ಈ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 170 ರನ್ನುಗಳಿಂದ ಜಯಿಸಿತ್ತು.

ಪೀಟರ್‌ ರಿಚರ್ಡ್‌ಸನ್‌ ಮೊದಲ 16 ಟೆಸ್ಟ್‌ಗಳಲ್ಲೇ 5 ಶತಕ ಬಾರಿಸಿ ವಿಶ್ವ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದರು. ಆದರೆ 1958-59ರ ಆಸ್ಟ್ರೇಲಿಯ ಪ್ರವಾಸದಲ್ಲಿ ಅನುಭವಿಸಿದ ಬ್ಯಾಟಿಂಗ್‌ ವೈಫ‌ಲ್ಯದ ಬಳಿಕ ಮೂಲೆಗುಂಪಾದರು. 1961ರಲ್ಲಿ ಟೆಸ್ಟ್‌ ಕ್ರಿಕೆಟಿಗೆ ಮರಳಿದರೂ ಅವರಲ್ಲಿ ಮೊದಲಿನ ಚಾರ್ಮ್ ಇರಲಿಲ್ಲ.

34 ಟೆಸ್ಟ್‌ ಆಡಿದ ರಿಚರ್ಡ್‌ಸನ್‌ 5 ಶತಕ ಸಹಿತ 2,061 ರನ್‌ ಹೊಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next