ಲಂಡನ್: ನೊಬೆಲ್ ಪುರಸ್ಕೃತ, “ದೇವ ಕಣ’ ಸಂಶೋಧಿಸಿದ ಬ್ರಿಟನ್ ಭೌತ ವಿಜ್ಞಾನಿ ಪೀಟರ್ ಹಿಗ್ಸ್ (94) ನಿಧನ ರಾಗಿ ದ್ದಾರೆ. ಅವರು ಅನಾ ರೋಗ್ಯ ದಿಂದ ಬಳಲುತ್ತಿದ್ದರು ಎಂದು ಎಡಿನ್‌ಬರ್ಗ್ ವಿವಿ ಹೇಳಿದೆ. ಎಡಿನ್‌ಬರ್ಗ್ ವಿವಿ ಯಲ್ಲಿ ಪೀಟರ್ ಹಿಗ್ಸ್ ಅವರು ಐದು ದಶಕಗಳ ಕಾಲ ಪ್ರೊಫೆಸರ್ ಆಗಿ ಕೆಲಸ ಮಾಡಿ, ಅತ್ಯುತ್ತಮ ಶಿಕ್ಷಕ, ಮಾರ್ಗ ದರ್ಶಕ ಮತ್ತು ಯುವ ವಿಜ್ಞಾನಿಗಳಿಗೆ ಪ್ರೇರಣೆ ಯಾಗಿದ್ದರು ಎಂದು ವಿವಿ ತಿಳಿಸಿದೆ. 1964ರಲ್ಲಿ ಪೀಟರ್ ಹಿಗ್ಸ್ ಮತ್ತು ಬೆಲ್ಜಿಯನ್ ಭೌತಶಾಸ್ತ್ರಜ್ಞ ಫ್ರಾಂಕೋ ಯಿಸ್ ಎಂಗ್ಲರ್ಟ್ ಅವರು ಪ್ರಸ್ತುತಪಡಿ ಸಿದ ಮಾದರಿ ಸಿದ್ಧಾಂತದ ಮೂಲಕ ಈ ವಿಶ್ವದ ಸೃಷ್ಟಿಯ ನಿಗೂಢತೆಯನ್ನು ಅರಿಯಲು ಸಾಧ್ಯವಾಯಿತು. ಭೌತ ಶಾಸ್ತ್ರದ ಅನೇಕ ಗೊಂದಲಗಳಿಗೆ ಪರಿಹಾ ರ ದೊರೆಯಿತು. ಹಾಗಾಗಿ, ಐನ್‌ಸ್ಟಿನ್ ಮತ್ತು ಮ್ಯಾಕ್ ಪ್ಲಾಂಕ್ ಜತೆಗೆ ಪೀಟರ್ಸ್ ಹಿಗ್ಸ್ ಅವರಿಗೂ ಸ್ಥಾನವಿದೆ.
ಏನಿದು ದೇವಕಣ?
1300 ಕೋಟಿಗೂ ಅಧಿಕ ವರ್ಷಗಳ ಹಿಂದೆ ಮಹಾಸ್ಫೋಟದ ಮೂಲಕ ವಿಶ್ವ ಉಗಮವಾಯಿತು. ಇದಕ್ಕೆ ಪರಮಾಣುವಿನ ಉಪಕಣ ಅಥವಾ ದೇವ ಕಣ ಕಾರಣ. ಈ ಸಂಗತಿ ಯನ್ನೇ ವಿಜ್ಞಾನಿಗಳು ಸಾಮಾನ್ಯ ಮಾದರಿಯ ಮೂಲಕ ಪ್ರಸ್ತುತಪಡಿ ಸಿದ್ದರು ಮತ್ತು ಅದನ್ನೇ ದೇವಕಣ ಅಥವಾ ಹಿಗ್ಸ್ ಬೋಸನ್ ಕಣ ಎಂದು ಕರೆಯಾಗುತ್ತದೆ.