Advertisement
ಕೋವ್ಯಾಕ್ಸಿನ್ ಲಸಿಕೆಯಲ್ಲಿ ನವಜಾತ ಕರುಗಳ ಸೀರಮ್ ನನ್ನು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕಳೆದೆರಡು ದಿನಗಳಿಂದ ಕೇಳಿಬರುತ್ತಿರವ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ ಡಿಸಿಜಿಐಗೆ ಪತ್ರದ ಮೂಲಕ ಲಸಿಕೆ ತಯಾರಿಕೆಯನ್ನು ಪ್ರಾಣಿ ಮುಕ್ತ ವಿಧಾನಕ್ಕೆ ಪರಿವರ್ತಿಸುವಂತೆ ಕೇಳಿಕೊಂಡಿದೆ.
Related Articles
Advertisement
ಡಿಸಿಜಿಐ ಲಸಿಕೆಯ ಉತ್ಪಾದಕರಿಗೆ ಪ್ರಾಣಿ ಮುಕ್ತ ವಿಧಾನವನ್ನು ಲಸಿಕೆ ತಯಾರಿಕೆಯನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡುತ್ತದೆ ಎಂಬ ನಂಬಿಕೆ ಪೆಟಾಗೆ ಇದೆ ಎಂದು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದು ಕರುಗಳ ಸಹಜ ಬೆಳವಣಿಗೆಗೆ ಅಡ್ಡಿ
ಈ ಕುರಿತಾಗಿ ಪ್ರತಿಕ್ರಿಯಿಸಿದ ಪೆಟಾದ ಸೈನ್ಸ್ ಪಾಲಿಸಿ ಅಡ್ವೈಸರ್ ಡಾ. ಅಂಕಿತ್ ಪಾಂಡೆ, ಸೀರಮ್ ನನ್ನು ಹೊರತೆಗೆಯುವ ಉದ್ದೇಶದಿಂದ ನವಜಾತ ಕರುಗಳನ್ನು ತಾಯಿ ಹಸುವಿನಿಂದ ಕರು ಜನಿಸಿದ ಕೆಲವೇ ಕೆಲವು ಸಮಯದ ಅಂತರದಲ್ಲೇ ಬೆರ್ಪಡಿಸಲಾಗುತ್ತದೆ. ಇದು ಅವುಗಳ ಸಹಜ ಬೆಳವಣಿಗೆಗೆ ತೊಂದರೆ ಉಂಟು ಮಾಡುತ್ತದೆ. ಮತ್ತು ಇದು ಅವುಗಳ ಸಂತತಿಗಳ ನಾಶಕ್ಕೂ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಇನ್ನು, ನವಜಾತ ಕರುವೊಂದರ ರಕ್ತದಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ತಯಾರಿಸಲಾಗುತ್ತದೆ ಎಂಬ ಆರೋಪಗಳನ್ನು ಕೇಂದ್ರ ತಳ್ಳಿಹಾಕಿದೆ. ಕಾಂಗ್ರೆಸ್ ನ ಗೌತಮ್ ಪಾಂಧಿ, ಟ್ವಿಟರ್ ನಲ್ಲಿ ದಾಖಲೆಗಳ ಸಹಿತ ಮಾಡಿದ್ದ ಆರೋಪಕ್ಕೆ ಪ್ರತಿಯಾಗಿ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಜಾಲತಾಣದಲ್ಲಿ ಪ್ರಕಟನೆ ನೀಡಲಾಗಿದೆ.
ಸರ್ಕಾರ ಹೇಳಿದ್ದೇನು..?
ಲಸಿಕೆ ತಯಾರಿಕಾ ಪ್ರಕ್ರಿಯೆಯ ಮೊದಲ ಹಂತದಲ್ಲಿರುವಂತೆ ಕರುವಿನ ರಕ್ತದಿಂದ ವೆಲೋ ಜೀವಕಣ ಪಡೆದಿರುವುದು ನಿಜ. ಆದರೆ, ಅವುಗಳನ್ನು ಕೋವಿಡ್ ವೈರಾಣುಗಳು ಧ್ವಂಸ ಮಾಡಿ ಹೊರಬಂದ ಬಳಿಕ ಅವುಗಳ ಅಸ್ತಿತ್ವ ನಾಶವಾಗಿರುತ್ತದೆ. ಕೊವ್ಯಾಕ್ಸಿನ್ ತಯಾರಿಕೆಯ 3ನೇ ಹಂತದಲ್ಲಿ ಕಂಡುಬರುವ ಕೋವಿಡ್ ವೈರಾಣುಗಳಲ್ಲಿ ಕರುವಿನ ಜೀವಕಣದ ಲವಲೇಷವೂ ಇರುವುದಿಲ್ಲ. ಈ ವೈರಾಣುಗಳನ್ನು ಕೊಂದು ಅವುಗಳ ಭಾಗಶಃ ಅಂಶ ಪಡೆದು ಲಸಿಕೆ ತಯಾರಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ಮಹಾಕುಂಭಮೇಳ ಕೋವಿಡ್ 19 ಪರೀಕ್ಷೆ ಹಗರಣ: ಎಫ್ ಐಆರ್ ದಾಖಲಿಸಲು ಉತ್ತರಾಖಂಡ್ ಆದೇಶ