ಇತ್ತೀಚಿನ ದಿನಗಳಲ್ಲಿ ಶ್ವಾನಗಳ ಹುಟ್ಟುಹಬ್ಬ ಆಚರಿಸುವ ವಿಡಿಯೋಗಳನ್ನ ಜಾಲತಾಣಗಳಲ್ಲಿ ನೋಡಿದ್ದೇವೆ. ಆದರೀಗ ಉತ್ತರ ಪ್ರದೇಶದ ಒಬ್ಬ ಶ್ವಾನಪ್ರಿಯ ತನ್ನ ಶ್ವಾನಗಳಿಗೆ ಥೇಟ್ ಮನುಷ್ಯರಂತೆಯೇ ಮದುವೆ ಮಾಡಿಸಿದ್ದು, ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಲಿಗಡ ನಿವಾಸಿ ದಿನೇಶ್ ಅವರು ತನ್ನ ಸಾಕು ಶ್ವಾನ ಟಾಮಿಗೆ ಜೈಲಿ ಎನ್ನುವ ಹೆಣ್ಣು ಶ್ವಾನದೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆಯಲ್ಲಿ ವಾದ್ಯ, ನೃತ್ಯ, ಊಟ ಎಲ್ಲವೂ ಇತ್ತು. ಇದಕ್ಕಾಗಿ ಬರೋಬ್ಬರಿ 45 ಸಾವಿರ ರೂ.ಗಳನ್ನು ಖರ್ಚು ಮಾಡಿದ್ದಾರೆ. ಹಾರಗಳನ್ನು ಹಾಕಿಕೊಂಡ ಶ್ವಾನಗಳ ಸುತ್ತ ಜನರು ಡಾನ್ಸ್ ಮಾಡುತ್ತಿರುವ ವಿಡಿಯೋ 25 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಹಲವರು ಶ್ವಾನಪ್ರೇಮವನ್ನು ಕಂಡು ಖುಷಿ ಪಟ್ಟರೆ ಮತ್ತೆ ಹಲವರು ಇದು ಅತಿರೇಕ ಎಂದಿದ್ದಾರೆ.