Advertisement

ಹೀಗೊಂದು ರೂಲ್ಸ್..: ಇನ್ಮುಂದೆ ಮನೆಯಲ್ಲಿ ನಾಯಿ ಸಾಕಿದರೆ ಟ್ಯಾಕ್ಸ್ ಕಟ್ಟಬೇಕು!

12:44 PM Jan 16, 2023 | Team Udayavani |

ಸಾಗರ್: ಇನ್ಮುಂದೆ ಮನೆಯಲ್ಲಿ ನಾಯಿ ಸಾಕಿದರೆ ನೀವು ಅದಕ್ಕಾಗಿ ನಗರಸಭೆಗೆ ಟ್ಯಾಕ್ಸ್ ಕಟ್ಟಬೇಕು. ಇಂತಹ ಒಂದು ಅಪರೂಪದ ನಿರ್ಧಾರವನ್ನು ಮಧ್ಯ ಪ್ರದೇಶ ರಾಜ್ಯದ ಸಾಗರ್ ನಗರಸಭೆ ಕೈಗೊಂಡಿದೆ. ನಗರದ ಸ್ವಚ್ಛತೆ ಮತ್ತು ಜನರ ಸುರಕ್ಷತೆಗಾಗಿ ಈ ನಿರ್ಧಾರ ಮಾಡಲಾಗಿದ್ದು, ಎಲ್ಲಾ 40 ಮಂದಿ ಸದಸ್ಯರು ಇದನ್ನು ಅವಿರೋಧವಾಗಿ ಬೆಂಬಲಿಸಿದ್ದಾರೆ.

Advertisement

ಸಾಗರ ನಗರ ಸಭೆಯಿಂದ ಕಾನೂನು ರೂಪುಗೊಂಡ ನಂತರ, ಈ ವರ್ಷದ ಏಪ್ರಿಲ್‌ ನಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ.

ನಾಯಿ ಕಾಟದ ಬಗ್ಗೆ ಸಾಗರ್ ನ ನಿವಾಸಿಗಳ ದೂರು ಹೆಚ್ಚಾದ ಹಿನ್ನೆಲೆಯಲ್ಲಿ ನಗರ ಸಭೆ ಈ ತೀರ್ಮಾನ ಮಾಡಿದೆ. ಬೀದಿ ನಾಯಿಗಳು ಮಾತ್ರವಲ್ಲದೆ, ಸಾಕು ನಾಯಿಗಳಿಂದಲೂ ನಗರದ ಸ್ವಚ್ಛತೆಗೆ ಹಾನಿಯುಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು.

ಇದನ್ನೂ ಓದಿ:ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಅಡ್ಡಗಟ್ಟಿ 10 ಲಕ್ಷ ರೂ. ದರೋಡೆ

ಸಾಗರ್ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಯಿಗಳ ನೋಂದಣಿ ಕಾರ್ಯ ನಡೆಯಲಿದ್ದು, ಲಸಿಕೆ ನೀಡಲಾಗುವುದು. ಅಲ್ಲದೆ ಮಾಲಕರಿಂದ ತೆರಿಗೆ ಸಂಗ್ರಹ ಮಾಡಲಾಗುತ್ತದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next