ತಮಿಳುನಾಡು : ಹೆತ್ತ ತಾಯಿ ಸಾಕಿದ ನಾಯಿ ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಎಂಬ ಮಾತು ಆಗಾಗ ಸಾಬೀತಾಗುತ್ತಿದೆ. ಇನ್ನು ನಿಯತ್ತು ಮತ್ತು ನಂಬಿಕೆಗೆ ಹೆಸರುವಾಸಿಯಾಗಿರುವ ಪ್ರಾಣಿಯೆಂದರೆ ನಾಯಿ. ತನ್ನ ಮಾಲೀಕನಿಗೆ ಸಂಕಷ್ಟ ಎದುರಾದ ಸಮಯದಲ್ಲಿ ನಾಯಿಯು ಕಾಪಾಡಲು ಮುಂದಾಗುತ್ತದೆ ಎಂಬ ಕಥೆಗಳನ್ನು ಓದಿದ್ದೇವೆ. ಆದ್ರೆ ಇದಕ್ಕೆ ಸಾಕ್ಷಿ ಎಂಬಂತೆ ತಮಿಳುನಾಡಿನಲ್ಲಿ ಒಂದು ಘಟನೆ ನಡೆದಿದೆ.
ಇತ್ತೀಚೆಗೆ ಕಾಮುಕನೊಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಿ ಪರಾರಿಯಾಗುತ್ತಿದ್ದ ವೇಳೆ ಮನೆಯಲ್ಲಿ ಸಾಕಿದ್ದ ನಾಯಿಯು ಆ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅತ್ಯಾಚಾರ ಮಾಡಿದ ಆರೋಪಿಯನ್ನು ತಮಿಳುನಾಡಿನ ಸೆಲ್ವಪುರಂ ಪ್ರದೇಶದ ದಿಲೀಪ್ ಕುಮಾರ್ (29) ಎಂದು ಗುರುತಿಸಲಾಗಿದೆ.
ಮನೆಯೊಂದರಲ್ಲಿ ಮಾನಸಿಕ ಅಸ್ವಸ್ತೆ ಇದ್ದು, ಆಕೆ ಮನೆಯ ಹೊರ ಕೊಠಡಿಯಲ್ಲಿ ವಾಸ ಮಾಡುತ್ತಿದ್ದಳು. ಕುಟುಂಬದ ಉಳಿದ ಸದಸ್ಯರು ಮನೆಯೊಳಗೆ ಮಲಗಿದ್ದರು. ಮಾನಸಿಕ ಅಸ್ವಸ್ತೆ ಇರುವಿಕೆಯನ್ನು ಚೆನ್ನಾಗಿ ತಿಳಿದಿದ್ದ ಆರೋಪಿ ದಿಲೀಪ್ ಕುಮಾರ್ ತನ್ನ ದ್ವಿಚಕ್ರ ವಾಹನವನ್ನು ಮನೆಯಿಂದ ದೂರದಲ್ಲಿಯೇ ನಿಲ್ಲಿಸಿ ಮನೆಗೆ ಬಂದಿದ್ದಾನೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗುತ್ತಿದ್ದ ವೇಳೆ ಅದೇ ಮನೆಯಲ್ಲಿ ಸಾಕಿದ್ದ ನಾಯಿಯು ಜೋರಾಗಿ ಬೊಗಳಲು ಶುರು ಮಾಡಿದೆ. ಅಲ್ಲದೆ ಆರೋಪಿ ಓಡಿ ಹೋಗಲು ಯತ್ನಿಸಿದಾಗ ಆತನ ಪ್ಯಾಂಟ್ ಹಿಡಿದು ನಿಲ್ಲಿಸಿದೆ. ನಂತರ ನಾಯಿ ಶಬ್ದ ಕೇಳಿದ ಮನೆಯವರು ಮತ್ತು ಅಕ್ಕ ಪಕ್ಕದ ಜನರು ಸೇರಿಕೊಂಡು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಮಾಹಿತಿ ನೀಡಿರುವ ಆರೋಪಿಯು, ಈ ಹಿಂದೆ ಒಂದೆರಡು ಬಾರಿ ಅದೇ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಅಶ್ಲೀಲ ವಿಡಿಯೋಗಳನ್ನು ಸೆರೆ ಹಿಡಿದಿದ್ದನಂತೆ. ಈತನ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಲಾಗಿದೆ.