ಪೆರುವಾಯಿ: ದ.ಕ.ಜಿ.ಪಂ. ಮತ್ತು ಪೆರುವಾಯಿ ಗ್ರಾ.ಪಂ., ಕಂದಾಯ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ಹಕ್ಕುಪತ್ರ
ವಿತರಣೆ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿತು.
ಪೆರುವಾಯಿ ರಾಜರಾಜೇಶ್ವರಿ ಭಜನ ಮಂದಿರದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಶಾಸಕಿ ಶಕುಂತಳಾ ಶೆಟ್ಟಿ , ಸರಕಾರ ತಂದ ಹತ್ತು ಹಲವು ಯೋಜನೆಗಳು ಗ್ರಾಮಾಂತರದಲ್ಲಿರುವ ಶೋಷಿತ ಜನಾಂಗಕ್ಕೆ ಸಿಗುವಂತಾಗಬೇಕು. ಅಭಿವೃದ್ಧಿ ಕೆಲಸದಲ್ಲಿ ಯಾರೂ ರಾಜಕೀಯ ಮಾಡಬಾರದು. ಸರಕಾರದ ಸವಲತ್ತು ಮನೆ ಮನೆಗೆ ತಲುಪಬೇಕು. ಅದು ನಮ್ಮ ಆದ್ಯತೆಯ ಕೆಲಸ. ಸಾಲಮನ್ನಾ ಯೋಜನೆ, ಇಂದಿರಾ ಕ್ಯಾಂಟಿನ್, ಉಳುವವನೆ ಹೊಲದೊಡೆಯ, ಅನ್ನಭಾಗ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಿವೆ ಎಂದರು.
ಗ್ರಾ.ಪಂ.ಅಧ್ಯಕ್ಷ ರಾಲ್ಫ್ ಡಿ’ಸೋಜಾ ಮಾತನಾಡಿ ಪೆರುವಾಯಿ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ದಿಗೆ 2.35 ಲ.ರೂ. ಬಿಡುಗಡೆ ಮಾಡಿ ಅಭಿವೃದ್ದಿಗೆ ಸಹಕರಿಸಿದ ಶಾಸಕರನ್ನು ಅಭಿನಂದಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಮಾಲತಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಪುಷ್ಪಲತಾ ಎಂ. ಶೆಟ್ಟಿ, ದ.ಕ. ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕೋಡಿಂಬಾಡಿ ಗ್ರಾ .ಪಂ. ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ತಾ.ಪಂ. ಮಾಜಿ ಸದಸ್ಯ ರಾಜೇಂದ್ರನಾಥ ರೈ ಪೆರುವಾಯಿಗುತ್ತು, ಅಳಿಕೆ ಗ್ರಾ.ಪಂ. ಸದಸ್ಯ ಜಗದೀಶ ಶೆಟ್ಟಿ ಅಳಿಕೆ, ಮೋನಪ್ಪ ಪೂಜಾರಿ ಅಳಿಕೆ, ಪೆರುವಾಯಿ ಗ್ರಾ.ಪಂ. ಸದಸ್ಯರಾದ ಗೋಪಾಲಕೃಷ್ಣ ನಾಯ್ಕ, ಗೋಪಾಲಕೃಷ್ಣ ಶೆಟ್ಟಿ, ಹರಿಣಾಕ್ಷಿ, ಕಂದಾಯ ನಿರೀಕ್ಷಕ ದಿವಾಕರ್, ಎಂಜಿನಿಯರ್ ಅಜಿತ್ ಕೆ.ಎನ್. ಮೊದಲಾದವರು ಉಪಸ್ಥಿತರಿದ್ದರು.
ಪೆರುವಾಯಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಶೋಕ ಎನ್.ಜಿ. ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಬಾಲಕೃಷ್ಣ ಪೂಜಾರಿ ವಂದಿಸಿದರು. ಸಾಮಾಜಿಕ ಕಾರ್ಯಕರ್ತ ಮಂಜುನಾಥ ಶೆಟ್ಟಿ ನಿರೂಪಿಸಿದರು.