Advertisement
ಮೊದಲ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡವು ಶನಿವಾರ ಮೊದಲ ಸೆಶನ್ ನಲ್ಲಿ 104 ರನ್ ಗಳಿಗೆ ಆಲೌಟಾಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ 172 ರನ್ ಗಳಿಸಿದೆ.
Related Articles
Advertisement
2010 ರಲ್ಲಿ ಎಂಸಿಜಿ ನಲ್ಲಿ ಆಂಡ್ರ್ಯೂ ಸ್ಟ್ರಾಸ್ ಮತ್ತು ಅಲಸ್ಟೇರ್ ಕುಕ್ ಅವರು 159 ರನ್ ಗಳಿಸಿದ ಬಳಿಕ ಆಸ್ಟ್ರೇಲಿಯಾದಲ್ಲಿ ಪ್ರವಾಸಿ ತಂಡದ ಮೊದಲ 150+ ಆರಂಭಿಕ ಜೊತೆಯಾಟವನ್ನು ರಾಹುಲ್ ಜೈಸ್ವಾಲ್ ಆಡಿದರು.
ಮೊದಲ ದಿನದಾಟದಲ್ಲಿ ವೇಗಿಗಳಿಗೆ ನೆರವು ನೀಡಿದ್ದ ಪರ್ತ್ ಪಿಚ್ ಎರಡನೇ ದಿನದಾಟದಲ್ಲಿ ನಿಧಾನವಾಗಿ ಬ್ಯಾಟರ್ ಸ್ನೇಹಿಯಾಗಿ ಪರಿವರ್ತನೆಯಾಗಿದೆ. ಮೊದಲ ದಿನದಾಟದಲ್ಲಿ 217 ರನ್ ಗಳಿಗೆ 17 ವಿಕೆಟ್ ಗಳು ಉರುಳಿದ್ದವು. ಆದರೆ ಎರಡನೇ ದಿನದಾಟದಲ್ಲಿ 209 ರನ್ ಗಳಿಗೆ ಕೇವಲ ಮೂರು ವಿಕೆಟ್ ಉರುಳಿದೆ.