Advertisement

ಪಾಲಕರ ಮನವೊಲಿಕೆ-ಪ್ರೇಮಿಗಳ ಕಲ್ಯಾಣ

03:11 PM Sep 14, 2022 | Team Udayavani |

ಮಾದನಹಿಪ್ಪರಗಿ: ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿ ಸುತ್ತಿದ್ದ ಪ್ರೇಮಿಗಳ ಪಾಲಕರ ಮನವೊಲಿಸಿದ ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಸರಳವಾಗಿ ಮದುವೆ ಮಾಡಿಸಿದ ಘಟನೆ ಗ್ರಾಮದಲ್ಲಿ ನಡೆದಿದೆ.

Advertisement

ಬಾಗಣ್ಣ ಮಲ್ಲಪ್ಪ ಗಿದನಿ ಮತ್ತು ಅಶ್ವಿ‌ನಿ ಬಸವರಾಜ ಸಾಲಿ ಮದುವೆಯಾದವರು. ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ದೂರದ ಬೆಂಗಳೂರಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರ ಪ್ರೇಮಕ್ಕೆ ಮೊಬೈಲ್‌ ಸೇತುವೆಯಾಗಿತ್ತು. ಮದುವೆ ಜಾತಿ ಅಡ್ಡ ಬಂದಿದ್ದರಿಂದ ಇಬ್ಬರಲ್ಲೂ ಆತಂಕ ಮನೆ ಮಾಡಿತ್ತು. ಈ ವೇಳೆ ಪ್ರೇಮಿ ಯುವತಿಯನ್ನು ಬೆಂಗಳೂರಿಗೆ ಬರಲು ತಿಳಿಸಿದ್ದ. ಶುಕ್ರವಾರ ಸಂಜೆ ಯುವತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಳು. ಪಾಲಕರಿಗೆ ಈ ವಿಷಯ ತಿಳಿದು ಪೊಲೀಸ್‌ ಠಾಣೆಗೆ ದೂರು ಕೊಡಲು ಹೋಗಿದ್ದರು. ಆಗ ಸ್ಥಳಿಯರು ವಾಪಸ್‌ ಕರೆಯಿಸಿ ಬೆಂಗಳೂರಿನಲ್ಲಿದ್ದ ಯವಕನಿಗೆ ಕರೆ ಮಾಡಿ, ಹುಡುಗಿಯನ್ನು ಕರೆದುಕೊಂಡು ಬನ್ನಿ, ನಿಮ್ಮಿಬ್ಬರ ಮದುವೆ ಮಾಡಿಸಲಾಗುವುದು ಎಂದು ತಿಳಿಸಿದ್ದರು.

ಅದೇ ರೀತಿ ಸೋಮವಾರ ಇಬ್ಬರು ಗ್ರಾಮಕ್ಕೆ ಬಂದಾಗ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರುಗಳು ಸೇರಿ ಎರಡು ಕಡೆಯ ಪಾಲಕರನ್ನು ಮತ್ತು ಸಮುದಾಯದವರನ್ನು ಕೂಡಿಸಿ ಮಾತುಕತೆ ನಡೆಸಿದರು. ನಂತರ ಇಬ್ಬರಿಗೂ ಮದುವೆ ಮಾಡಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಓದಲಿಂಗ ಸಿ.ಕೆ ಮದುವೆ ಪ್ರಮಾಣ ಪತ್ರ ನೀಡಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪ ಕೋಳಸೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಶೈಲ ಸಾಲಿ, ಧರ್ಮಣ್ಣ ಕೌಲಗಿ, ಶಿವಲಿಂಗಪ್ಪ ಜಮಾದಾರ, ಮುಖಂಡರಾದ ಮಲ್ಲಿನಾಥ ದುಧಗಿ, ಶಿವಯೋಗಿ ಕಾರಬಾರಿ ಮುಂತಾದವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next