ವೈಜ್ಞಾನಿಕ ಯುಗದಲ್ಲಿ ಎಲ್ಲವೂ ಸರಿಯಾಗಿ ನಡೆಯಬೇಕೆಂಬ ಆಸೆ ಪ್ರತಿಯೋರ್ವರಲ್ಲೂ ಇರುತ್ತದೆ. ಶಾಲಾ ಮಕ್ಕಳಿಂದ ಹಿಡಿದು ಐಟಿ ಕಂಪೆನಿಗಳಲ್ಲಿ ಮಾಡುವ ಎಲ್ಲರೂ ತಮ್ಮ ವ್ಯಕ್ತಿತ್ವ ವಿಕಸನವಗಬೇಕೆಂಬುದನ್ನು ಬಯಸುತ್ತಾರೆ. ಇದು ಈ ಯುಗದ ಟ್ರೆಂಡಿಂಗ್. ಇಂತಹ ವ್ಯಕ್ತಿತ್ವ ವಿಕಸನ ತರಬೇತಿಗಳಿಗಾಗಿಯೇ ತಯಾರಾಗಿರುವಂತಹ ತರಬೇತುದಾರರಿದ್ದಾರೆ. ಇಂತಹ ಬೇಡಿಕೆ ಇತ್ತೀಚಿಗಿನ ದಿನಗಳಲ್ಲಿ ಹೆಚ್ಚುತ್ತಿದೆ. ಬೆಂಗಳೂರು, ಮುಂಬಯಿಯಂತಹ ನಗರಗಳಲ್ಲಿ ಇಂತಹ ತರಬೇತುದಾರರನ್ನು ತಯಾರಿಸುವ ತರಗತಿಗಳು ಆರಂಭವಾಗಿವೆ. ನೀವು ಒಬ್ಬ ಉತ್ತಮ ಮಾತುಗಾರರಾಗಿದ್ದರೆ ಅಥವಾ ನಿಮ್ಮಲ್ಲಿಯೂ ಯಶಸ್ಸು ಗಳಿಸುವ ಸುಲಭ ಸೂತ್ರಗಳಿದ್ದರೆ ಅದನ್ನು ಇನ್ನಷ್ಟು ಹೆಚ್ಚಳಗೊಳಿಸಿ ನೀವೂ ಒಬ್ಬ ಮೋಟಿವೇಶನಲ್ ಸ್ಪೀಕರ್ ಅಥವಾ ವ್ಯಕ್ತಿತ್ವ ವಿಕಸನ ತರಬೇತುದಾರರಾಗಬಹುದು.
ನೀವು ತರಬೇತುದಾರರಾಗಬಹುದು
ವ್ಯಕ್ತಿತ್ವವಿಕಸನ ತರಬೇತುದಾರರಿಗೆ ಮಾತೇ ಬಂಡವಾಳ. ವಿದ್ಯಾರ್ಹತೆ ಇಂತಿಷ್ಟೇ ಎಂದು ನಿಗದಿಪಡಿಸುವಂತಿಲ್ಲ. ಅದು ಅವರವರ ಹವ್ಯಾಸಕ್ಕೆ ಬಿಟ್ಟಿರುವಂತದ್ದು. ಕನಿಷ್ಟ ಯಾವುದಾದರೂ ವಿಷಯದಲ್ಲಿ ಡಿಗ್ರಿ ಪಡೆದಿದ್ದರೆ ಸಾಕು. ಸಾಮಾನ್ಯ ಜ್ಞಾನ ಇವರಿಗೆ ಬಹಳ ಹೆಚ್ಚಾಗಿರಬೇಕಾಗುತ್ತದೆ. ಜತೆಗೆ ಯಾವುದಾದರೂ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್‌ನಿಂದ ಮೋಟಿವೇಷನಲ್ ತರಬೇತಿ ಪ್ರಮಾಣ ಪತ್ರ ಪಡೆದಿರಬೇಕು. 6 ತಿಂಗಳಿನಿಂದ ಹಿಡಿದು 5 ವರ್ಷದ ಅವಧಿಯವರೆಗಿನ ಬೇರೆಬೇರೆ ತರಗತಿಗಳು ಇರುತ್ತವೆ. ಈ ಸಂದರ್ಭದಲ್ಲಿ ಹಲವಾರು ಭಾಷಣ, ಮಾತುಗಾರಿಕೆ ಎಲ್ಲವನ್ನು ಕಲಿಸಲಾಗುತ್ತದೆ.
ಪ್ರಾಯದ ಮಿತಿ ಇಲ್ಲ ಈ ಉದ್ಯೋಗಕ್ಕೆ. ಕಲಿಯುವ ಆಸಕ್ತಿ ಮತ್ತು ಕಲಿಸುವ ಹಂಬಲ ಇದ್ದರೆ ಸಾಕು. ತರಬೇತಿ ಮುಗಿಸಿದ ಮೇಲೆ ಯಾವುದಾದರೂ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗ ಲಭಿಸುತ್ತದೆ. ಅಥವಾ ತಾವೇ ಸ್ವತಃ ಆಫೀಸ್ ತೆರೆದು ಮೋಟಿವೇಶನಲ್ ತರಗತಿಗಳನ್ನು ನೀಡ ಬಹುದು. ಇದನ್ನು ಪೂರ್ಣಕಾಲಿಕ ಹಗೂ ಅರೆಕಾಲಿಕ ಉದ್ಯೋಗಗಳಾಗಿಯೂ ಸ್ವೀಕರಿಸಬಹುದು. ಹೆಚ್ಚಾಗಿ ಪೂರ್ಣಕಾಲಿಕ ಉದ್ಯೋಗವೇ ಸೂಕ್ತ. ಇಂದು ಸಂದೀಪ್ ಮಹೇಶ್ವರಿ, ಚೇತನ್ ಭಗತ್, ಜೈ ಶೆಟ್ಟಿ ಹಾಗೂ ಗುರು ರಾಜ್‌ಕರಜಗಿ ಅವರು ಮೋಟಿವೇಶನಲ್ ಸ್ಪೀಕರ್ ಆಗಿ ನಮ್ಮ ಮುಂದೆ ಕಾಣಬಹುದು.
ಮೋಟಿವೇಶನಲ್ ಸ್ಪೀಕರ್ ಅಥವಾ ವ್ಯಕ್ತಿತ್ವ ವಿಕಸನ ತರಬೇತುದಾರದ ಆದಾಯ ನಿಶ್ಚಯವಾಗುವುದು ಅವರ ಮಾತು, ಕೆಲಸದ ಮೇಲೆ. ಒಬ್ಬ ಮಾತುಗಾರ ಚಟುವಟಿಕೆಯಿಂದಿರುತ್ತಾನೋ ಅಷ್ಟೇ ಅವನ ಪ್ರಚಾರ ಕೂಡ ಹೆಚ್ಚುತ್ತದೆ. ಆದಾಯ ಕೂಡ ಇದರ ಮೇಲೆಯೇ ಅವಲಂಬಿತವಾಗಿರುತ್ತದೆ.
ಪ್ರಚಾರ ಹೆಚ್ಚಿದ ಒಬ್ಬ ಉತ್ತಮ ಮಾತುಗಾರನ ವಾರ್ಷಿಕ ಆದಾಯ 2 ಲಕ್ಷಕ್ಕಿಂತಲೂ ಅಧಿಕವಾಗಿರುತ್ತದೆ, ಅವರ ಪ್ರತಿ ನಿಮಿಷದ ಮಾತಿಗೆ ಹಣ ಲಭಿಸುತ್ತದೆ.ಆಫೀಸಿನಲ್ಲಿ ಕುಳಿತು ಕೆಲಸ ಮಾಡಲಾಗದೆ ಏನಾದರೂ ಹೊಸತನ ಮಾಡಬೇಕೆಂದು ಇಚ್ಛಿಸುವವರಿಗೆ ಈ ಉದ್ಯೋಗ ಸೂಕ್ತವಾಗಿದೆ. ಮುಂಬಯಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ಕೋರ್ಸ್‌ಗಳು ಲಭ್ಯವಿದೆ.
ಸುಶ್ಮಿತಾ ಶೆಟ್ಟಿ