Advertisement

ಮಲಪ್ರಭಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿ ರಕ್ಷಣೆ

06:25 PM Sep 16, 2021 | Team Udayavani |

ಬಾಗಲಕೋಟೆ : ಕುಳಗೇರಿ ಕ್ರಾಸ್ ನ  ಗೋವನಕೊಪ್ಪ ಬಳಿ ಮಲಪ್ರಭಾ ನದಿ ಮಧ್ಯೆ 2 ಗಂಟೆಗಳ ಕಾಲ ಮುಳ್ಳಿನಕಂಟಿಯಲ್ಲಿ ಆಶ್ರಯ ಪಡೆದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

Advertisement

ನದಿಯಲ್ಲಿ ಸ್ನಾನಕ್ಕೆಂದು ತೆರಳಿ ಕಾಲುಜಾರಿ ಬಿದ್ದಿದ್ದ ಕೊಣ್ಣೂರ ಗ್ರಾಮದ ನಿವಾಸಿ ಬಸಪ್ಪ ಫಕ್ಕೀರಪ್ಪ ತಳವಾರ, ನೀರಿನಲ್ಲಿ ಕೊಚ್ಚಿ ಹೋಗಿ ನದಿಯಲ್ಲಿದ್ದ ಮುಳ್ಳಿನ ಕಂಟಿಯನ್ನೇ ಆಶ್ರಯಿಸಿ ನಿಂತಿದ್ದ. ಈ ಕುರಿತು ಸ್ಥಳೀಯರಿಂದ ಅಗ್ನಿಶಾಮಕ ದಳ ತಂಡಕ್ಕೆ ಮಾಹಿತಿ ನೀಡಲಾಗಿತ್ತು.

ಬಾದಾಮಿಯಿಂದ ಗೋವನಕೊಪ್ಪ ಗ್ರಾಮಕ್ಕೆ ಆಗಮಿಸಿದ ಅಗ್ನಿಶಾಮಕ ದಳ. ಕಾರ್ಯಾಚರಣೆ ನಡೆಸಿ ಬಸಪ್ಪನನ್ನು ರಕ್ಷಿಸಿದೆ.

ಇನ್ನು ನಿನ್ನೆಯಿಂದ ಮಲಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ಸ್ ನೀರಿನ ಹರಿವು ಹಿನ್ನೆಲೆ ಹೆಚ್ಚಳವಾಗಿದ್ದ ನೀರಿನ ಪ್ರಮಾಣ ಹೆಚ್ಚಾಗಿತ್ತು. ಪ್ರವಾಹದ ನೀರು ಬರುತ್ತಿದ್ದಂತೆ ಬಾದಾಮಿ ತಹಶೀಲ್ದಾರ ಸುಹಾಸ ಇಂಗಳೆ, ಕಂದಾಯ ನಿರೀಕ್ಷಕ ಎ ಡಿ ಸಾರವಾಡ, ಗ್ರಾಮ ಲೇಕ್ಕಾಧಿಕಾರಿ ಎಸ್ ಜಿ ದ್ಯಾಪೂರ, ತೌಶೀಫ್ ಧಾರವಾಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿಕೊಟ್ಟಿದ್ದು, ನದಿ ದಡದಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next