Advertisement

ದಾಖಲೆಗಳಲ್ಲಿ ತಾಯಿಯ ಹೆಸರಷ್ಟೇ ನಮೂದಿಸಲು ಅವಕಾಶ: ಕೇರಳ ಹೈಕೋರ್ಟ್‌

07:51 PM Jul 24, 2022 | Team Udayavani |

ಕೊಚ್ಚಿ: ಅವಿವಾಹಿತ ತಾಯಂದಿರು ಮತ್ತು ಅತ್ಯಾಚಾರ ಸಂತ್ರಸ್ತೆಯರ ಮಕ್ಕಳಿಗೂ ಈ ದೇಶದಲ್ಲಿ ಖಾಸಗಿತನ, ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವಂಥ ಮೂಲಭೂತ ಹಕ್ಕುಗಳಿವೆ ಎಂದು ಹೇಳಿರುವ ಕೇರಳ ಹೈಕೋರ್ಟ್‌, ವ್ಯಕ್ತಿಯೊಬ್ಬರಿಗೆ ಅವರ ಜನನ ಪ್ರಮಾಣಪತ್ರ ಸೇರಿದಂತೆ ಇತರೆ ಎಲ್ಲ ದಾಖಲೆಗಳಲ್ಲೂ ತಮ್ಮ ತಾಯಿಯ ಹೆಸರನ್ನಷ್ಟೇ ನಮೂದು ಮಾಡಲು ಅವಕಾಶ ಕಲ್ಪಿಸಿದೆ.

Advertisement

ಅವಿವಾಹಿತ ತಾಯಿಗೆ ಹುಟ್ಟಿದ ಮಗುವೂ ಈ ದೇಶದ ನಾಗರಿಕನೇ ಆಗಿರುತ್ತಾನೆ. ಆತ ಅಥವಾ ಆಕೆಗೆ ಸಂವಿಧಾನವು ಒದಗಿಸಿರುವ ಮೂಲಭೂತ ಹಕ್ಕುಗಳಲ್ಲಿ ಯಾರು ಕೂಡ ಮೂಗುತೂರಿಸುವಂತಿಲ್ಲ ಎಂದು ಹೈಕೋರ್ಟ್‌ ನ್ಯಾ.ಪಿ.ವಿ.ಕುಂಞಿಕೃಷ್ಣನ್‌ ಹೇಳಿದ್ದಾರೆ.

ಅವಿವಾಹಿತ ಮಹಿಳೆಯೊಬ್ಬರ ಪುತ್ರನ ಮೂರೂ ದಾಖಲೆಗಳಲ್ಲಿ ತಂದೆಯ ಹೆಸರು ಭಿನ್ನವಾಗಿತ್ತು. ಹೀಗಾಗಿ, ಕೋರ್ಟ್‌ ಮೊರೆಹೋಗಿದ್ದ ವ್ಯಕ್ತಿ, ತನ್ನ ಎಲ್ಲ ದಾಖಲೆಗಳಲ್ಲೂ ತಾಯಿಯ ಹೆಸರನ್ನು ಮಾತ್ರ ನಮೂದಿಸಲು ಅವಕಾಶ ಕಲ್ಪಿಸುವಂತೆ ಕೋರಿದ್ದರು. ಅದನ್ನು ಪುರಸ್ಕರಿಸಿರುವ ನ್ಯಾಯಾಲಯ, ಜನನ ಪ್ರಮಾಣಪತ್ರ, ಗುರುತಿನ ಚೀಟಿ ಸೇರಿದಂತೆ ಇತರೆ ಎಲ್ಲ ದಾಖಲೆಗಳಲ್ಲೂ ತಂದೆಯ ಹೆಸರನ್ನು ಕಿತ್ತುಹಾಕಿ, ತಾಯಿಯ ಹೆಸರನ್ನಷ್ಟೇ ಸೇರಿಸಿ, “ಸಿಂಗಲ್‌ ಪೇರೆಂಟ್‌’ ಎಂದು ನಮೂದಿಸಬೇಕು ಎಂದು ಸೂಚಿಸಿದೆ.

ಜನನ ಮತ್ತು ಮರಣ ನೋಂದಣಿ ಇಲಾಖೆ, ಶಿಕ್ಷಣ ಇಲಾಖೆ, ಹೈಯರ್‌ ಸೆಕೆಂಡರಿ ಎಕ್ಸಾಮಿನೇಷನ್‌ ಬೋರ್ಡ್‌, ಯುಐಡಿಎಐ, ಐಟಿ ಇಲಾಖೆ, ಪಾಸ್‌ಪೋರ್ಟ್‌ ಕಚೇರಿ, ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಗಳಿಗೆ ಕೋರ್ಟ್‌ ಈ ಸೂಚನೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next