Advertisement

ಮುಂದುವರಿದ ಅತೃಪ್ತರ ಮನವೊಲಿಕೆ

06:05 AM Jun 14, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಅತೃಪ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ನಿರಂತರ ಮುಂದುವರೆದಿದೆ. ಮತ್ತೂಂದೆಡೆ ಸಚಿವ ಸ್ಥಾನ ವಂಚಿತರು ಎಚ್‌.ಕೆ. ಪಾಟೀಲ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅವರ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

Advertisement

ಬುಧವಾರ ಅತೃಪ್ತರ ತಂಡದ ನಾಯಕ ಎಂ.ಬಿ.ಪಾಟೀಲ್‌ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಭೇಟಿ ನಿಡಿ, ಪಕ್ಷದ ಮನವಿಗೆ ಸ್ಪಂದಿಸಿ ಸರ್ಕಾರದ ಭಾಗವಾಗುವಂತೆ ಮನವಿ ಮಾಡಿದ್ದಾರೆ. ಅವರ ಬೆನ್ನಲ್ಲೇ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್‌ ಪಾಟೀಲ್‌ ಭೇಟಿ ನೀಡಿ ಪಾಟೀಲರ ಮನವೊಲಿಸುವ ಪ್ರಯತ್ನ ನಡೆಸಿದರು.

ಆದರೆ, ಎಂ.ಬಿ.ಪಾಟೀಲ್‌ ಮಾತ್ರ ತಮ್ಮ ನಿಲುವು ಸಡಿಲಿಸದೇ ಮುಂದಿನ ನಡೆಯ ಬಗ್ಗೆ ಮೌನವಾಗಿರುವುದು ನಾಯಕರ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಎಂ.ಬಿ.ಪಾಟೀಲ್‌ ಆಪ್ತ ಮೂಲಗಳ ಪ್ರಕಾರ ಸಂಪುಟದಲ್ಲಿ ಸೇರಲು ಸಹಮತ ವ್ಯಕ್ತಪಡಿಸಿದ್ದು, ತಮ್ಮೊಂದಿಗೆ ಗುರುತಿಸಿಕೊಂಡವರಿಗೂ ನ್ಯಾಯ ದೊರಕಿಸಿಕೊಡ 
ಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಎಚ್‌.ಕೆ. ಪಾಟೀಲ್‌ ನಿವಾಸಕ್ಕೂ ಅತೃಪ್ತರು ಭೇಟಿ ನೀಡಿ ತಮ್ಮ ಬೇಡಿಕೆಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅವರ ಬಣಕ್ಕೆ ಸೇರ್ಪಡೆಯಾಗುತ್ತಿರುವ ಶಾಸಕರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ.

ಎಂ.ಬಿ. ಪಾಟೀಲರು ಪಕ್ಷದ ವಿರುದ್ಧ ಮಾತನಾಡಿಲ್ಲ. ಪಕ್ಷದ ಮಿತಿಯಲ್ಲಿಯೇ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇನ್ನೂ ಸಂಪೂರ್ಣ ಸಂಪುಟ ರಚನೆಯಾಗಿಲ್ಲ. ಎಲ್ಲರೂ ಹೊಂದಿಕೊಂಡು ಹೋಗಬೇಕು.
ದಿನೇಶ್‌ ಗುಂಡೂರಾವ್‌
ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

ನಮ್ಮ ಹಿರಿತನಕ್ಕೆ ಬೆಲೆ ಕೊಡದಿದ್ದಾಗ ನಮ್ಮ ಭಾಗದ ಜನರು, ಹಿತೈಶಿಗಳು ಅಸಮಾಧಾನಗೊಂಡಿದ್ದಾರೆ. ಅವರ ನೋವನ್ನು ಕಡೆಗಣಿಸಲು ಆಗುವುದಿಲ್ಲ. ನಮ್ಮ ಜೊತೆಗಿರುವ ಶಾಸಕರ ಅಭಿಪ್ರಾಯಗಳನ್ನು ಎಐಸಿಸಿ ಪ್ರತಿನಿಧಿಗಳಿಗೆ ತಿಳಿಸಿದ್ದೇವೆ.
– ಎಚ್‌.ಕೆ. ಪಾಟೀಲ್‌
ಅತೃಪ್ತ ಶಾಸಕರ ತಂಡದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next