Advertisement

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶ್ರದ್ಧೆ ಪರಿಶ್ರಮ ಅಗತ್ಯ

03:56 PM Apr 25, 2022 | Niyatha Bhat |

ಶಿವಮೊಗ್ಗ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶ್ರದ್ಧೆ, ಪರಿಶ್ರಮ ಜತೆಯಲ್ಲಿ ಉತ್ತಮ ಸಂವಹನ ಕೌಶಲ್ಯವು ಅತ್ಯಂತ ಮುಖ್ಯ ಎಂದು ಎಚ್‌ಸಿಲ್‌ ತರಬೇತಿ ವ್ಯವಸ್ಥಾಪಕ ವಿನಯ್‌ಕುಮಾರ್‌ ಹೇಳಿದರು.

Advertisement

ಶಿವಮೊಗ್ಗ ನಗರದಲ್ಲಿ ಸಮನ್ವಯ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಉನ್ನತ ಹುದ್ದೆ ತಲುಪಿದರೂ ಆಯಾ ಕ್ಷೇತ್ರಕ್ಕೆ ಅಗತ್ಯವಿರುವ ಸಂವಹನ ಕೌಶಲ್ಯ ಅಗತ್ಯವಾಗಿ ಬೇಕಾಗಿರುತ್ತದೆ. ಸಂವಹನ ಕೌಶಲ್ಯ ಉತ್ತಮ ಮಾಡಿಕೊಳ್ಳುವುದು ಸಹ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಅವಶ್ಯಕ ಎಂದು ತಿಳಿಸಿದರು.

ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕ ಚಿರಂಜೀವಿ ಮಾತನಾಡಿ, ಸ್ಪರ್ಧಾತ್ಮಕ ಅಂಶವನ್ನುಋಣಾತ್ಮಕವಾಗಿ ಪರಿಗಣಿಸಬಾರದು. ನಮ್ಮ ಸಾಮರ್ಥ್ಯದ ಪರಿಗಣನೆಗೆ ನಡೆಯುವ, ಅರ್ಹತೆಯ ಪರೀಕ್ಷೆ ಆಗಿರುತ್ತದೆ. ಧನಾತ್ಮಕವಾಗಿ ಆಲೋಚಿಸುವ, ನಮ್ಮಲ್ಲಿರುವ ಸಾಮಾರ್ಥ್ಯ ತೋರಿಸುವ ಬಗ್ಗೆ ಸದಾ ಆಲೋಚಿಸಬೇಕು ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗೆ ನಡೆಸಬೇಕು. ಅಧ್ಯಯನ ಪಠ್ಯ, ಸಮಯದ ನಿರ್ವಹಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸರಿಯಾದ ತಿಳವಳಿಕೆ ಮೂಡಿಸಿ ಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬೇಕು. ಸಾಧಕರ ಹಾದಿಯ ಬಗ್ಗೆ ಸರಿಯಾಗಿ ಅರಿತುಕೊಂಡು ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಸಮನ್ವಯ ಟ್ರಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಮನೋಸಾಮಾರ್ಥ್ಯ ವೃದ್ಧಿಸಿಕೊಳ್ಳುವತ್ತ ಗಮನಹರಿಸಬೇಕು. ನಾವು ಸಾ ಧಿಸುವ ಗುರಿಯ ಮಾರ್ಗವನ್ನು ಹಂತ ಹಂತವಾಗಿ ಸಾಗುವ ಬಗ್ಗೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಧನಾತ್ಮಕ ಆಲೋಚನೆಗಳೇ ನಮ್ಮ ಶಕ್ತಿ. ಒಳ್ಳೆಯ ಅಲೋಚನೆಗಳನ್ನು ಯೋಜಿಸುತ್ತ ಅನುಷ್ಠಾನಗೊಳಿಸಿ ಯಶಸ್ಸು ಸಾಧಿಸಬೇಕು ಎಂದರು.

ಸಮನ್ವಯ ಟ್ರಸ್ಟ್‌ ನಿರಂತರವಾಗಿ ಸಮಾಜಮುಖೀ ಮತ್ತು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಸಮನ್ವಯಟ್ರಸ್ಟ್‌ ಸ್ಥಾಪಕ ಸದಸ್ಯೆ ಸ್ಮಿತಾ, ಟ್ರಸ್ಟಿ ನಿತ್ಯಾ ಎಚ್.ಆರ್., ಪ್ರಮುಖರಾದ ವಿಜಯಕುಮಾರ್‌, ವಿಸ್ಮಯ, ಶರತ್‌, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next