Advertisement

ಸುರಂಗ ದುರಸ್ತಿ ಕಾರ್ಯ ಪೂರ್ಣ : ರೈಲು ಸಂಚಾರ ಪುನಾರಂಭ

07:20 PM Sep 17, 2020 | sudhir |

ಕಾರವಾರ: ಕೊಂಕಣ ರೈಲ್ವೆಯ ಕಾರವಾರ ವ್ಯಾಪ್ತಿಯ ಪೆರ್ನೆಮ್ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡು ಟ್ರಾಕ್‌ ಫಿಟ್‌ ಪ್ರಮಾಣ ಪತ್ರ ನೀಡಲಾಗಿದ್ದು, ಮಂಗಳವಾರ ರಾತ್ರಿಯಿಂದಲೇ ರೈಲು ಸಂಚಾರ ಪ್ರಾರಂಭವಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

Advertisement

ಎರ್ನಾಕುಲಂ ಜಂಕ್ಷನ್‌ – ಹಜರತ್‌ ನಿಜಾಮುದ್ದೀನ್‌ ವಿಶೇಷ ಎಕ್ಸ್‌ಪ್ರೆಸ್‌ (02617) ಸೆ.15ರಿಂದಲೇ ತನ್ನ ಎಂದಿನ ಮಾರ್ಗವಾದ ಮಡಗಾಂವ್‌ – ರೋಹ – ಪನ್ವೇಲ್‌ – ಕಲ್ಯಾಣ್‌ ಮೂಲಕ ಸಂಚರಿಸಲಿದೆ. ನಿಜಾಮುದ್ದೀನ್‌- ಎರ್ನಾಕುಲಂ ಜಂಕ್ಷನ್‌ ವಿಶೇಷ ಎಕ್ಸ್‌ಪ್ರೆಸ್‌ (02618) ಸೆ.15ರಿಂದ ಕಲ್ಯಾಣ್‌- ಪನ್ವೇಲ್‌- ರೋಹ- ಮಡಗಾಂವ್‌- ಮಂಗಳೂರು ಜಂಕ್ಷನ್‌ ಮೂಲಕ ಸಂಚರಿಸಲಿದೆ.

ನಿಜಾಮುದ್ದೀನ್‌ ಎರ್ನಾಕುಲಂ ಜಂಕ್ಷನ್‌ ದುರಂತೊ ವಿಶೇಷ ಎಕ್ಸ್‌ಪ್ರೆಸ್‌ (02284) ಸೆ.19ರಿಂದ ತನ್ನ ಮಾಮೂಲಿ ಮಾರ್ಗವಾದ ವಸಾಯ್‌ ರೋಡ್‌ – ಪನ್ವೆಲ್‌ – ರೋಹ – ಮಡಗಾಂವ್‌ – ಮಂಗಳೂರು ಜಂಕ್ಷನ್‌ ಮೂಲಕ ಸಂಚರಿಸಲಿದೆ. ಎರ್ನಾಕುಳಂ ಜಂಕ್ಷನ್‌ – ನಿಜಾಮುದ್ದೀನ್‌ ದುರಂತೊ ಎಕ್ಸ್‌ಪ್ರೆಸ್‌ (02283) ಸೆ.22ರಿಂದ ತನ್ನ ಎಂದಿನ ಮಾರ್ಗವಾದ ಮಂಗಳೂರು ಜಂಕ್ಷನ್‌ – ಮಡಗಾಂವ್‌ – ರೋಹ – ಪನ್ವೆಲ್‌ – ವಸಾಯ್‌ ರೋಡ್‌ ಮೂಲಕ ತೆರಳಲಿದೆ.

ನವದೆಹಲಿ- ತಿರುವನಂತಪುರಂ ಸೆಂಟ್ರಲ್‌- ನವದೆಹಲಿ ರಾಜಧಾನಿ ವಿಶೇಷ ರೈಲು (02432 ಹಾಗೂ 02431) ಸೆ.16ರಿಂದ ಸೇವೆಗಳನ್ನು ಆರಂಭಿಸಲಿದೆ. ಲೋಕಮಾನ್ಯ ತಿಲಕ್‌ ಟರ್ಮಿನಲ್‌- ತಿರುವನಂತಪುರಂ- ಲೋಕಮಾನ್ಯ ತಿಲಕ್‌ ಟರ್ಮಿನಲ್‌ ವಿಶೇಷ ರೈಲು (06345- 06346) ಸೆ.16ರಿಂದ ಸೇವೆ ಪ್ರಾರಂಭಿಸಿರುವುದಾಗಿ ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next