Advertisement

950 ಎಂಎಸ್ಐಎಲ್ ಮಳಿಗೆಗಳಿಗೆ ಸನ್ನದು; ಹೊಸ ವೈನ್ ಶಾಪ್ ಲೈಸನ್ಸ್ ಇಲ್ಲ: ಗೋಪಾಲಯ್ಯ

02:17 PM Feb 09, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ 950 ಎಂಎಸ್ಐಎಲ್ ಸನ್ನದುಗಳನ್ನು ನೀಡಲಾಗುತ್ತಿದೆ. ಹೊಸ ವೈನ್ ಶಾಪ್ ಗಳಿಗೆ ಲೈಸನ್ಸ್ ನೀಡುವುದಿಲ್ಲ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯ ಚಿಲ್ಲರೆ ಮಾರಾಟ ಸಂಘದವರೊಂದಿಗೆ ಸಭೆ ನಡೆಸಲಾಯಿತು.ಇದುವರೆಗೂ 19,433 ಕೋಟಿ ರೂ ಅಬಕಾರಿ ತೆರಿಗೆ ಸಂಗ್ರಹವಾಗಿದೆ. 22,700 ಕೋಟಿ ರೂ. ಈ ವರ್ಷದ ಗುರಿ ಇದೆ. ಮಾರ್ಚ್ 31 ಕ್ಕೆ ಇದನ್ನು ಮುಟ್ಟುವ ಗುರಿ ಹೊಂದಲಾಗಿದೆ.  ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 800 ಕೋಟಿ ರೂ ಹೆಚ್ಚುವರಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ತೆರಿಗೆ ಸಂಗ್ರಹದಲ್ಲಿ ಸುಧಾರಣೆ, ಮಾರ್ಚ್ ಮೊದಲ ವಾರ ರಾಜ್ಯ ಬಜೆಟ್ ಮಂಡನೆ: ಸಿಎಂ

ಇಲಾಖೆ ಇನ್ಸ್‌ಪೆಕ್ಟರ್ ಗಳಿಗೆ 300 ಬೈಕ್ ನೀಡಲಾಗಿದೆ. 70 ಜೀಪ್ ಕೊಳ್ಳಲು ನಿರ್ಧರಿಸಲಾಗಿದೆ. ಅಬಕಾರಿ ಜಿಲ್ಲಾಧಿಕಾರಿ ಕಚೇರಿಗಳಿಗೆ 4 ಆಯುಧ ನೀಡಲಾಗುವುದು. ಮಾದಕ ವಸ್ತು ತಡೆಯಲು ಅಬಕಾರಿ ಇಲಾಖೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಜುಲೈ 2020ಯಿಂದ 620 ಗ್ರಾಮ ಸಭೆಗಳಲ್ಲಿ ಅಧಿಕಾರಿಗಳು ಜಾಗೃತಿ ಸಭೆ ಮಾಡಿದ್ದಾರೆ. 31500 ಕಳ್ಳಭಟ್ಟಿ ಪ್ರಕರಣಗಳಲ್ಲಿ ದಾಳಿ ಮಾಡಿ 19406 ಪ್ರಕರಣ ದಾಖಲು ಮಾಡಲಾಗಿದೆ ಎಂದರು.

Advertisement

ಇದನ್ನೂ ಓದಿ: ಮದ್ಯ ಖಜಾನೆ ಧಣಿ,ಮನೆಯನ್ನೇ ಕಚೇರಿ ಮಾಡಿದ್ದ BBMP ಅಧಿಕಾರಿ ದೇವೇಂದ್ರಪ್ಪ ಸೇವೆಯಿಂದ ಅಮಾನತು!

ವೈನ್ ಶಾಪ್ ಜೊತೆಗೆ ಪಕ್ಕದಲ್ಲಿ ಹೊಸ ಅಂಗಡಿ ತೆರೆಯಲು ಬೇಡಿಕೆಯಿದೆ. ಮುಖ್ಯಂಂತ್ರಿಗಳ ಜೊತೆ ಇದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಹೊಸ ಲೈಸೆನ್ಸ್ ಇಲ್ಲ. ಸಿಎಲ್ 7 ಕಾನೂನು ಪ್ರಕಾರ ಅನುಮತಿ ನೀಡಲಾಗುತ್ತಿದೆ ಎಂದು ಸಚಿವವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next