Advertisement

ಮೀನುಗಾರಿಕೆಗೆ ಶರತ್ತು ಬದ್ಧ‌ ಅನುಮತಿ

06:24 PM May 06, 2020 | Suhan S |

ಕಾರವಾರ: ಮೀನುಗಾರಿಕೆಗೆ ಸರಕಾರ ಶರತ್ತುಬದ್ಧ ಅನುಮತಿ ನೀಡಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಅವರು ತಾಪಂ ಸಭಾ ಭವನದಲ್ಲಿ ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಸಿದರು.

Advertisement

ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆಗೆ ಅನುಮತಿ ನೀಡುವಂತೆ ಕೋರಿದ್ದೆ. ಈ ಬೇಡಿಕೆಗೆ ಸಚಿವರು ಸರತ್ತು ಬದ್ಧ ಅನುಮತಿ ನೀಡಲಾಗುವುದು. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರಿಕೆ ನಡೆಸಬೇಕು. ಶಾಸಕರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ ಎಂದು ಅವರು ವಿವರಿಸಿದರು.

ಮೀನುಗಾರ ಮುಖಂಡರಿಗೆ ಸಾಮಾಜಿಕ ಅಂತರದ ಮಹತ್ವ ವಿವರಿಸಿದ ಅವರು, ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿಮುಖ್ಯ. ಸ್ಯಾನಿಟೈಸರ್‌ನ್ನು ಆಗಾಗ ಬಳಸಬೇಕು. ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖಾ ನಿರ್ದೇಶಕರು, ಪೊಲೀಸ್‌ ಉಪಾಧೀಕ್ಷಕರು, ತಾಪಂ ಇಒ, ತಹಶಿಲ್ದಾರರು ಹಾಗೂ ಮೀನುಗಾರ ಮುಖಂಡರಾದ ಗಣಪತಿ ಉಳ್ವೆàಕರ, ಗಣಪತಿ ಮಾಂಗ್ರೆ, ಕೆ.ಟಿ. ತಾಂಡೇಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next