Advertisement
45 ಸಾವಿರ ಮನೆಗಳಿಗೆ ಶುದ್ಧನೀರುಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೆರ್ಲ-ಬೀಯಪಾದೆಯಲ್ಲಿ ಸರಪಾಡಿ ಮತ್ತು ಇತರ 97 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಶೀಘ್ರ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳಿಸುವ ಭರವಸೆ ಹೊಂದಿದ್ದಾರೆ. ಇದರಿಂದ ಈ ಭಾಗದ 45 ಸಾವಿರ ಮನೆಗಳಿಗೆ ಶುದ್ಧ ನೀರು ಪೂರೈಕೆಯಾಗ ಲಿದೆ. ಯೋಜನೆ ಅನುಷ್ಠಾನದಿಂದ ಕೊಳವೆ ಬಾವಿಯ ಬಳಕೆ ಕಡಿಮೆಯಾಗಲಿದ್ದು, ಅಂತರ್ಜಲವೂ ವೃದ್ಧಿ ಯಾಗುತ್ತದೆ. ಆದರೆ ಕುಡಿಯುವ ನೀರನ್ನು ಕೃಷಿ ಕಾರ್ಯ ಸಹಿತ ಇತರ ಕಾರ್ಯಗಳಿಗೆ ಬಳಸದೆ ಯೋಜನೆಯ ಯಶಸ್ಸಿಗೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಇಲಾಖಾ ಎಂಜಿನಿಯರ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯತ್‌ಗಳು- 9
( ಸರಪಾಡಿ, ಉಳಿ, ಬಡಗಕಜೆಕಾರು, ನಾವೂರು, ಮಣಿನಾಲ್ಕೂರು, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡೂರು, ಇರ್ವತ್ತೂರು).
ಗ್ರಾಮಗಳು- ಸರಪಾಡಿ, ದೇವಶ್ಯಮೂಡೂರು, ಉಳಿ, ಬಡಗಕಜೆಕಾರು, ತೆಂಕಕಜೆಕಾರು, ನಾವೂರು, ಮಣಿನಾಲ್ಕೂರು, ಪಿಲಾತಬೆಟ್ಟು, ಕಾವಳಮೂಡೂರು, ದೇವಸ್ಯಪಡೂರು, ಕಾವಳಪಡೂರು, ಕಾಡಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ
ಜನವಸತಿ ಪ್ರದೇಶ – 97.
ಮನೆಗಳು- 45 ಸಾವಿರ.
ಓವರ್‌ಹೆಡ್ ಟ್ಯಾಂಕ್-3.
Related Articles
ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಲ ಸಂಪನ್ಮೂಲಕ್ಕೆ ಪೆರ್ಲ ಬೀಯಪಾದೆಯಲ್ಲಿ ನೇತ್ರಾವತಿ ನದಿ ಮಧ್ಯದಲ್ಲಿ ಜಾಕ್‌ವೆಲ್ ನಿರ್ಮಿಸಿ ನೀರೆತ್ತಲಾಗುವುದು. ಬಳಿಕ ತೆಕ್ಕಿಕಾಡುವಿನ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧಗೊಂಡು ಫಲಾನುಭವಿ ಗ್ರಾಮಗಳಿಗೆ ಪೂರೈಸಲಾಗುವುದು. ಎಂ.ಆರ್.ಪಿ.ಎಲ್. ಅಣೆಕಟ್ಟು ಇರುವ ಕಾರಣ ನೀರಿನ ಸಮಸ್ಯೆಯಾಗದು. ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಕೃಷ್ಣ ಮಾನಪ್ಪ , ಕಿರಿಯ ಎಂಜಿನಿಯರ್, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗ, ಬಂಟ್ವಾಳ
Advertisement
ರತ್ನದೇವ್ ಪುಂಜಾಲಕಟ್ಟೆ