Advertisement

ಟಿಕ್ ಟಾಕ್ ಸೇರಿ ಚೀನಾ ಮೂಲದ 59 ಅಪ್ಲಿಕೇಶನ್ ಗಳಿಗೆ ಶಾಶ್ವತ ನಿಷೇಧ

11:28 AM Jan 26, 2021 | Team Udayavani |

ನವ ದೆಹಲಿ : ಸಿಕ್ಕಿಂನ ನಕು ಲಾದಲ್ಲಿ ಚೀನಾದ ಸೈನಿಕರೊಂದಿಗಿನ ಸಂಘರ್ಷ ನಡೆದ ಬೆನ್ನಲ್ಲೆ  ಜನಪ್ರಿಯ ಟಿಕ್  ಟಾಕ್ ಸೇರಿದಂತೆ 59 ಚೀನಾ ಮೂಲದ ಆ್ಯಪ್‌  ಮೇಲೆಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶಾಶ್ವತ ನಿಷೇಧ ಹೇರಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.

Advertisement

ಓದಿ :  ರಾಮ ಮಂದಿರ ನಿರ್ಮಾಣ ತಂಡದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸ್ಥಾನ ಸಿಕ್ಕಿರುವುದು ಹೆಮ್ಮೆ:ರಾಮುಲು

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನಪ್ರಿಯ ವಿಡಿಯೋ ಅಪ್ಲಿಕೇಶನ್ ಟಿಕ್ ಟಾಕ್ ಮತ್ತು ಇತರ 58 ಚೀನೀ ಅಪ್ಲಿಕೇಶನ್‌ಗಳಿಗೆ ಶಾಶ್ವತ ನಿಷೇಧ ಹೇರಲು ಹೊಸ ನೋಟಿಸ್ ನೀಡಿದೆ, ಕಳೆದ ವರ್ಷ ಜೂನ್‌ನಲ್ಲಿ ಈ ಸಂಬಂಧಿಸಿದಂತೆ ಸರ್ಕಾರ ನಿರ್ಬಂಧಗಳನ್ನು ವಿಧಿಸಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಮೊದಲ ಬಾರಿಗೆ ಚೀನಾ ಮೂಲದ ಬೈಟ್‌ ಡ್ಯಾನ್ಸ್‌ನ ಜನಪ್ರಿಯ ವೀಡಿಯೊ-ಶೇರಿಂಗ್ ಅಪ್ಲಿಕೇಶನ್ ಟಿಕ್‌ ಟಾಕ್, ಟೆನ್ಸೆಂಟ್ ಹೋಲ್ಡಿಂಗ್ಸ್ ವೀಚಾಟ್ ಮತ್ತು ಅಲಿಬಾಬಾದ ಯುಸಿ ಬ್ರೌಸರನ್ನು ಒಳಗೊಂಡಿರುವ 59 ಅಪ್ಲಿಕೇಶನ್ ಗಳಿಗೆ ನಿಷೇಧ ಹೇರಿದಾಗ, ಅದರ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ನಿಮ್ಮ ನಿಲುವನ್ನು  ವಿವರಿಸಲು ಕೇಂದ್ರ ಸೂಚಿಸಿತ್ತು.

ಕೇಂದ್ರ ಸರ್ಕಾರ ಕಂಪೆನಿಗಳು ನೀಡಿರುವ ಪ್ರತಿಕ್ರಿಯೆಗೆ ಸಮಾಧಾನ ತರಲಿಲ್ಲ. ಆದ್ದರಿಂದ, ಈ 59 ಅಪ್ಲಿಕೇಶನ್‌ ಗಳ ಶಾಶ್ವತ ನಿಷೇಧಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

Advertisement

ಈ ಅಪ್ಲಿಕೇಶನ್‌ಗಳು “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತವಾಗಿವೆ” ಎಂದು ಸಚಿವಾಲಯದ ಕಳೆದ ಜೂನ್ ಅಲ್ಲಿ ನೀಡಲಾಗಿದ್ದ ಆದೇಶದಲ್ಲಿ ತಿಳಿಸಿದೆ.

ಓದಿ : ಕೋವಿಡ್-19 ಕೊನೆಯ ಹಂತದಲ್ಲಿದ್ದೇವೆ ಆದರೆ ಅಲಕ್ಷ್ಯ ಸರಿಯಲ್ಲ: ರಾಜ್ಯಪಾಲ ವಿ.ಆರ್.ವಾಲಾ

ವಿವಾದಿತ ಹಿಮಾಲಯನ್ ಗಡಿ ಭಾಗದಲ್ಲಿ ಚೀನಾದ ಸೈನಿಕರೊಂದಿಗೆ ಸಂಘರ್ಷ ನಡೆದು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಆ ಬಳಿಕ ಭಾರತವು  ಚೀನಾ ಮೂಲದ 59 ಅಪ್ಲಿಕೇಶನ್ ನನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದ್ದು, ಇದನ್ನು “ಡಿಜಿಟಲ್ ಸ್ಟ್ರೈಕ್” ಎಂದು ಕರೆಯಲಾಗಿತ್ತು.

ಮಾತ್ರವಲ್ಲದೇ, ಕಳೆದ ಸೆಪ್ಟೆಂಬರ್‌ನಲ್ಲಿ, ಚೀನಾ ಗಡಿ ಭಾಗದಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ತಂತ್ರಜ್ಞಾನ ಕಂಪನಿಗಳ ಮೇಲೆ ಪ್ರತಿ ಕ್ರಮವಾಗಿ ಟೆನ್‌ಸೆಂಟ್‌ ನ ಜನಪ್ರಿಯ ವೀಡಿಯೊ ಗೇಮ್ ಪಬ್ಜಿ ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್‌ ಗಳನ್ನು ನಿಷೇಧಿಸಿತ್ತು. ಸದ್ಯ, ಕಂಪನಿಯು ನೋಟಿಸನ್ನು ಪರಿಶೀಲಿಸುತ್ತಿದೆ ಮತ್ತು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಟಿಕ್ ಟಾಕ್ ನ ಪ್ರತಿನಿಧಿ ಸುದ್ದಿ ಸಂಸ್ಥೆಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಓದಿ :  102 ಸಾಧಕರ ಮುಕುಟಕ್ಕೆ ಪದ್ಮಶ್ರೀ ಕಿರೀಟ

 

 

Advertisement

Udayavani is now on Telegram. Click here to join our channel and stay updated with the latest news.

Next