Advertisement

ಪೆರಿ-ಪ್ರೋಸ್ಥೆಟಿಕ್‌ ಸೋಂಕು –ನೀವು ತಿಳಿಯಬೇಕಾದದ್ದು

03:18 PM Nov 13, 2022 | Team Udayavani |

ವಿವಿಧ ಅನಾರೋಗ್ಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಶಸ್ತ್ರಚಿಕಿತ್ಸಾ ವಿಧಾನಗಳು ಸುಲಭಲಭ್ಯವಿರುವ ಈ ಕಾಲಘಟ್ಟದಲ್ಲಿ ಅಂತರ್ನಿವೇಶಕ ಸಲಕರಣೆ (ಇಂಪ್ಲಾಂಟೆಡ್‌ ಮೆಟೀರಿಯಲ್ಸ್‌) ಗಳನ್ನು ಬಹು ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿದೆ – ಹೃದಯದ ಕವಾಟಗಳು, ಆ್ಯಂಜಿಯೊಪ್ಲಾಸ್ಟಿ ಸಾಮಗ್ರಿಗಳಿಂದ ತೊಡಗಿ ಮೂಳೆ ಮುರಿತಗಳಿಗಾಗಿ ಆರ್ಥೋಪೆಡಿಕ್‌ ಅಂತರ್ನಿವೇಶಕಗಳು ಮತ್ತು ಸಂಧಿ ಬದಲಾವಣೆ ಸಾಮಗ್ರಿಗಳ ವರೆಗೆ ಇವು ಬಳಕೆಯಲ್ಲಿವೆ.

Advertisement

ವೈದ್ಯಕೀಯ ಸಾಮಗ್ರಿಗಳು ಮತ್ತು ಔಷಧಗಳಲ್ಲಿ ಆಗಿರುವ ಅಭಿವೃದ್ಧಿಯಿಂದಾಗಿ ಈ ಅಂತರ್ನಿವೇಶಕಗಳಿಗೆ ದೇಹದಲ್ಲಿ ಉಂಟಾಗುವ ತಿರಸ್ಕಾರ ಮತ್ತು ಅಲರ್ಜಿ ಪರಿಣಾಮಗಳನ್ನು ಪರಿಹರಿಸಿಕೊಳ್ಳುವುದು ನಮಗೆ ಸಾಧ್ಯವಾಗಿದೆ. ಆದರೆ ದೇಹದ ಒಳಗಿರುವ ಪರವಸ್ತುಗಳನ್ನು ದೇಹದ ರೋಗ ನಿರೋಧಕ ಶಕ್ತಿಯು ರಕ್ಷಿಸುವುದಿಲ್ಲ. ಹೀಗಾಗಿ ಇವು ದೇಹವನ್ನು ಪ್ರವೇಶಿಸುವ ಸೂಕ್ಷ್ಮಜೀವಿಗಳ ದಾಳಿಗೆ ತುತ್ತಾಗುವುದು ಸಾಧ್ಯ. ಇಂತಹ ಕೃತಕಾವಯವ ಸಂಬಂಧಿ ಸೋಂಕು (ಪೆರಿ-ಪ್ರೋಸ್ಥೆಟಿಕ್‌ ಇನ್‌ಫೆಕ್ಷನ್‌) ಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡುವುದು ಸಾಧ್ಯ.

ಇಂತಹವುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂಥವು ಎಲುಬು ಸಂಬಂಧಿ ಅಂತರ್ನಿವೇಶಕ ಸೋಂಕುಗಳಾಗಿದ್ದು, ಅವುಗಳನ್ನು ಈ ಕೆಳಗೆ ಚರ್ಚಿಸಲಾಗಿದೆ. ಕೃತಕ ಅಂಗಗಳಿಂದ (ಪ್ರೋಸ್ಥೆಸೆಸ್‌) ಸೋಂಕುಗಳು (ಶೇ. 75) ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಸೋಂಕುನಾಶಕ ಮುನ್ನೆಚ್ಚರಿಕೆಗಳಲ್ಲಿ ಉಂಟಾದ ಕೊರತೆಯಿಂದ ಕಾಣಿಸಿಕೊಳ್ಳುತ್ತವೆ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ಅದಾದ ತತ್‌ ಕ್ಷಣ ಅವು ಕಾಣಿಸಿಕೊಳ್ಳಲಾರವು, ಆದರೆ ದೇಹ ಪ್ರವೇಶಿಸಿದ ಸೂಕ್ಷ್ಮಜೀವಿ ಮತ್ತು ಸೋಂಕಿನ ತೀವ್ರತೆಯನ್ನು ಆಧರಿಸಿ ಅದು ವಿಳಂಬವಾಗಿಯೂ ಕಾಣಿಸಿಕೊಳ್ಳಬಹುದು. ನಾಲ್ಕನೇ ಒಂದರಷ್ಟು ಪ್ರಮಾಣದ ಪ್ರಕರಣಗಳಲ್ಲಿ ಮೂತ್ರಾಂಗ/ ಎದೆ (ನ್ಯುಮೋನಿಯಾ)ಯಂತಹ ಗಂಭೀರ – ಚಿಕಿತ್ಸೆಗೊಳಪಡದ ಸೋಂಕುಗಳು ಅಥವಾ ದಂತವೈದ್ಯಕೀಯದಂತಹ ಲಘು ಸ್ವರೂಪದ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ದೇಹ ಪ್ರವೇಶಿಸಿದ ಬ್ಯಾಕ್ಟೀರಿಯಾಗಳು ರಕ್ತಪ್ರವಾಹದ ಮೂಲಕ ಸಂಚರಿಸಿ ಲೋಹೀಯ ಕೃತಕ ಅಂಗಾಂಗಗಳ ಮೇಲೆ ಶೇಖರಗೊಂಡು ಕಾಲಕ್ರಮದಲ್ಲಿ ಹಾನಿಯನ್ನು ಉಂಟುಮಾಡಬಹುದು.

ಹಲವು ಬಗೆಯ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳು ಲೋಹೀಯ ಕೃತಕ ಅಂಗಾಂಗಗಳಿಗೆ ಅಂಟಿಕೊಂಡು ಅವುಗಳ ಮೇಲೆ ದೇಹದ ರೋಗ ನಿರೋಧಕ ಶಕ್ತಿ ಅಥವಾ ಔಷಧವಾಗಿ ನೀಡಲಾದ ಆ್ಯಂಟಿಬಯಾಟಿಕ್‌ಗಳಿಂದ ನಿವಾರಿಸಲಾಗದ ಭಿತ್ತಿಯನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ ಅವು ಹಾಗೆಯೇ ಉಳಿದುಕೊಂಡು ಸುತ್ತಲಿನ ಅಂಗಾಂಶಗಳನ್ನು ನಾಶ ಮಾಡುವ ಮೂಲಕ ಕೃತಕ ಅವಯವ ಜೋಡಣೆ ಸಡಿಲಗೊಳ್ಳಲು ಅಥವಾ ಕಾಲಕ್ರಮೇಣ ಕೀವು ಉಂಟಾಗಲು ಕಾರಣವಾಗಬಹುದು.

Advertisement

ಅಳವಡಿಸಲಾದ ಕೃತಕ ಅವಯವಗಳನ್ನು ತೆಗೆದುಹಾಕದ ವಿನಾ ಈ ಸೋಂಕು ನಿವಾರಣೆಯಾಗದು. ಮೂಳೆಮುರಿತಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೃತಕ ಅವಯವಗಳನ್ನು ಜೋಡಿಸಲಾದ ಸಂದರ್ಭದಲ್ಲಿ, ಅವುಗಳ ಪಾತ್ರವು ಮುರಿದ ಮೂಳೆಗಳು ಮರುಜೋಡಣೆಗೊಳ್ಳುವವರೆಗೆ ಮಾತ್ರವಿರುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಲೋಹೀಯ ಕೃತಕ ಅವಯವವನ್ನು ತೆಗೆದುಹಾಕಿದ ಬಳಿಕ ಹೆಚ್ಚು ತೀವ್ರವಲ್ಲದ ಸೋಂಕು ದೀರ್ಘ‌ಕಾಲಿಕ ಪರಿಣಾಮ ಇಲ್ಲದೆ ಬಗೆಹರಿಯಬಹುದು ರೋಗ ನಿರೋಧಕ ಶಕ್ತಿ ಅಥವಾ ಔಷಧವಾಗಿ ನೀಡಲಾದ ಆ್ಯಂಟಿಬಯಾಟಿಕ್‌ಗಳಿಂದ ನಿವಾರಿಸಲಾಗದ ಭಿತ್ತಿಯನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಆದ್ದರಿಂದ ಅವು ಹಾಗೆಯೇ ಉಳಿದುಕೊಂಡು ಸುತ್ತಲಿನ ಅಂಗಾಂಶಗಳನ್ನು ನಾಶ ಮಾಡುವ ಮೂಲಕ ಕೃತಕ ಅವಯವ ಜೋಡಣೆ ಸಡಿಲಗೊಳ್ಳಲು ಅಥವಾ ಕಾಲಕ್ರಮೇಣ ಕೀವು ಉಂಟಾಗಲು ಕಾರಣವಾಗಬಹುದು. ಅಳವಡಿಸಲಾದ ಕೃತಕ ಅವಯವಗಳನ್ನು ತೆಗೆದುಹಾಕದ ವಿನಾ ಈ ಸೋಂಕು ನಿವಾರಣೆಯಾಗದು. ಮೂಳೆಮುರಿತಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೃತಕ ಅವಯವಗಳನ್ನು ಜೋಡಿಸಲಾದ ಸಂದರ್ಭದಲ್ಲಿ, ಅವುಗಳ ಪಾತ್ರವು ಮುರಿದ ಮೂಳೆಗಳು ಮರುಜೋಡಣೆಗೊಳ್ಳುವವರೆಗೆ ಮಾತ್ರವಿರುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಲೋಹೀಯ ಕೃತಕ ಅವಯವವನ್ನು ತೆಗೆದುಹಾಕಿದ ಬಳಿಕ ಹೆಚ್ಚು ತೀವ್ರವಲ್ಲದ ಸೋಂಕು ದೀರ್ಘ‌ಕಾಲಿಕ ಪರಿಣಾಮ ಇಲ್ಲದೆ ಬಗೆಹರಿಯಬಹುದು

ಡಾ| ಯೋಗೀಶ್‌ ಕಾಮತ್‌, ಕನ್ಸಲ್ಟಂಟ್‌ ಸ್ಪೆಶಲಿಸ್ಟ್‌, ಹಿಪ್‌ ಮತ್ತು ನೀ ಆರ್ಥೋಪೆಡಿಕ್‌ ಸರ್ಜನ್‌, ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next