Advertisement

ಅವಕಾಶ ಬಳಸಿಕೊಂಡು ಸಾಧನೆ ಮಾಡಬೇಕು: ಶಾಂತಿ ಹೆಗ್ಡೆ

03:24 PM Mar 21, 2017 | Harsha Rao |

ನಗರ : ಮಹಿಳೆಯರಿಗೆ ಅವರದ್ದೇ ಆದ ಹಕ್ಕು, ಕರ್ತವ್ಯಗಳಿವೆ. ವ್ಯವಸ್ಥೆಯೊಳಗಿನ ಅವಕಾಶಗಳನ್ನು ಸದುಪ ಯೋಗಪಡೆದುಕೊಂಡು ಸಾಧನೆಗಳನ್ನು ಮಾಡಬೇಕು ಎಂದು ಪುತ್ತೂರು ಸಿಡಿಪಿಒ ಶಾಂತಿ ಹೆಗ್ಡೆ ಹೇಳಿದರು.
ಪುತ್ತೂರು ಲಯನ್ಸ್‌ ಸೇವಾ ಮಂದಿರ ದಲ್ಲಿ ಕ್ಯಾಂಪ್ಕೋ ಲಿ. ಪುತ್ತೂರು, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ನವ್ಯಶ್ರೀ ಮಹಿಳಾ ಮಂಡಲ, ಲಯನ್ಸ್‌ ಮತ್ತು ಲಯನೆಸ್‌ ಕ್ಲಬ್‌, ವನಿತಾ ಸಮಾಜ ಹಾರಾಡಿ, ಮಹಿಳಾ ವಿವಿ ಸ., ಸಂಘ ಪುತ್ತೂರು, ಒಡಿಯೂರು ವಜ್ರಮಾತಾ ಮಹಿಳಾ ಸಂಘ ಪುತ್ತೂರು ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

Advertisement

ಪುತ್ತೂರು ಮಹಿಳಾ ಠಾಣೆ ಆರಂಭಗೊಂಡಿದೆ. ಮಹಿಳೆಯರಿಗಾಗಿ ಕಾನೂನುಗಳಿವೆ. ಅನ್ಯಾಯವಾದಾಗ ನ್ಯಾಯ ಯುತ ರೀತಿಯಲ್ಲಿ ಪ್ರತಿಭಟಿಸುವ ಮನೋಭಾವವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಹೇಳಿದ ಅವರು, ಪುತ್ತೂರಿನಲ್ಲಿ ಮಹಿಳಾ ಸಂಘಟನೆಗಳ ಮಧ್ಯೆ ಇರುವ ಒಗ್ಗಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥೈರ್ಯ ತುಂಬಬೇಕು
ಮಹಿಳಾ ಮಂಡಲಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ಸವಿತಾ ಜೆ. ಮಾತನಾಡಿ, ಇಂದು ಮಹಿಳೆ ಸಾಕಷ್ಟು ಸಬಲತೆಯನ್ನು ಸಾಧಿಸಿದರೂ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹ ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕು. ಉತ್ತಮ ಶಿಕ್ಷಣ ಪಡೆದುಕೊಳ್ಳುವ ಜತೆಗೆ ಅವಕಾಶ ಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು.

ಮುಖ್ಯ ಅತಿಥಿಯಾಗಿದ್ದ ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್‌ ಕಾಸರಗೋಡು ಮಾತನಾಡಿ, ವಿವಿಧ ಸಂಘಟನೆಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಬಲಯುತ ರಾಗಬೇಕು ಎಂದು ಹೇಳಿದರು.

ಸಮ್ಮಾನ
ಈ ಸಂದರ್ಭ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಾದ ಡಾ| ನಳಿನಿ ರೈ, ಮಾಲಾ ತೋಳ್ಪಾಡಿ, ಎಎಸ್‌ಐ ಸೇಸಮ್ಮ, ಬಿಎಡ್‌ನ‌ಲ್ಲಿ 4ನೇ ರ್‍ಯಾಂಕ್‌ ಪಡೆದ ಮಹಾಲಕ್ಷ್ಮೀ ಹಾಗೂ 5ನೇ ರ್‍ಯಾಂಕ್‌ ಪಡೆದ ವಿನುತಾ ಅವರನ್ನು ಸಮ್ಮಾನಿಸಲಾಯಿತು.

Advertisement

ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ನಳಿನಿ ರೈ, ವೈದ್ಯೆ ಅವರು, ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂಬುದನ್ನು ಮಹಿಳೆಯರು ಸಾಬೀತುಪಡಿಸಬೇಕು. ಜಲ ಸಂರಕ್ಷಣೆ, ಅರಣ್ಯ ಸಂರಕ್ಷಣೆಯ ಕುರಿತಂತೆ ಮಹಿಳೆ ಯರ ಮೂಲಕ ಜಾಗೃತಿ ಕಾರ್ಯಕ್ರಮ ಗಳು ನಡೆಯಬೇಕು ಎಂದರು. 

ಪುತ್ತೂರು ಮಹಿಳಾ ಠಾಣೆ ಎಸ್‌ಎಸ್‌ಐ ಸೇಸಮ್ಮ  ಮಾತನಾಡಿ, ಮಹಿಳೆಯರಿಗೆ ಬಲ ಇಲ್ಲದಾಗ ದೌರ್ಜನ್ಯಗಳು ನಡೆಯುತ್ತವೆ. ಈ ಕಾರಣದಿಂದ ಸಂಘಟನೆಯ ಒಗ್ಗಟ್ಟಿನ ಮೂಲಕ ಮಹಿಳೆಯರು ಮುಂಚೂಣಿಗೆ ಬರಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಸಂಘಟಕಿ ಗೌರಿ ಬನ್ನೂರು ಸ್ವಾಗತಿಸಿ, ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು. ಲಯನೆಸ್‌ ಕ್ಲಬ್‌ ಅಧ್ಯಕ್ಷೆ ಅನ್ನಪೂರ್ಣಾ ಎಸ್‌.ಕೆ. ರಾವ್‌, ಮಹಿಳಾ ಸಂಘಗಳ ಪ್ರಮುಖರಾದ ನಯನಾ ರೈ, ವತ್ಸಲಾ ರಾಜಿ, ಪ್ರೇಮಲತಾ ರಾವ್‌, ಅನಿತಾ ಉಪಸ್ಥಿತರಿದ್ದರು. ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಅನಂತರ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next