ತುಮಕೂರು: ಕೊರೊನಾ 2ನೇ ಅಲೆ ಎಲ್ಲ ಕಡೆತೀವ್ರವಾಗಿ ಹರಡುತ್ತಿದೆ. ನಗರದಲ್ಲಿಯೂಅದರ ತೀವ್ರತೆ ಹೆಚ್ಚಿರುವ ಹಿನ್ನೆಲೆ ನಗರದಜನತೆ ಜಾಗೃತರಾಗಿರಬೇಕು. ತಮ್ಮ ದೇಹದಲ್ಲಿಆರೋಗ್ಯ ಸಮಸ್ಯೆ ಕಂಡ ತಕ್ಷಣ ತಪಾಸಣೆಮಾಡಿಸಿಕೊಳ್ಳಬೇಕು ಎಂದು ಶಾಸಕಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದಅವರು, ಸರ್ಕಾರ ಕಠಿಣ ಕ್ರಮ ಕೈಗೊಂಡರುಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು,ಆಸ್ಪತ್ರೆಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಲುಸೋಂಕಿತರು ತಡವಾಗಿ ಕೊರೊನಾ ತಪಾಸಣೆಒಳಗಾಗುತ್ತಿದ್ದು ಮುಖ್ಯ ಕಾರಣವೆಂದುವೈದ್ಯಕೀಯ ಪರಿಣಿತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ವಿಶೇಷನಿಗಾ ಘಟಕಕ್ಕೆ ಅತ್ಯಂತ ಬೇಡಿಕೆ ಉಂಟಾಗಿದೆ.ಆಮ್ಲಜನಕದ ಕೊರತೆ ಉಂಟಾಗಿದೆ.ಆರೋಗ್ಯದ ಸಮಸ್ಯೆ ಕಂಡು ಬಂದ ತಕಣ Òತಪಾಸಣೆಗೆ ಒಳಗಾದರೇ ಸುಲಭವಾಗಿಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಬಹುದಾಗಿದೆ. ಯಾರೂ ಸಹ ಹೆದರುವಅವಶ್ಯಕತೆ ಇಲ್ಲ.
ಮಾಸ್ಕ್ ಧರಿಸಿ ಅಂತರಕಾಪಾಡಿಕೊಂಡು ನಮ್ಮ ಆರೋಗ್ಯದ ರಕ್ಷಣ ಮಾಡಿಕೊಳ್ಳೋಣ ಎಂದರು.ತುಮಕೂರು ಮಹಾನಗರ ಪಾಲಿಕೆಯವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿವಾರ್ಡ್‌ಮಟ್ಟದ ಸಮಿತಿರಚಿಸಲಾಗಿದ್ದು, ಈಸಮಿತಿಯಲ್ಲಿ ಆಯಾವಾರ್ಡ್‌ನ ಮಹಾನಗರಪಾಲಿಕೆ ಸದಸ್ಯರು,ಆರೋಗ್ಯ ನೀರಿಕ್ಷಕರು,ಕರವಸೂಲಿಗಾರು ,ಪ್ರಾಥಮಿಕ ಆರೋಗ್ಯ ಕೇಂದ್ರದ, ಖಾಸಗಿಆಸ್ಪತ್ರೆಯ ವೈದ್ಯರು, ಪೊಲೀಸ್ ಸಿಬ್ಬಂದಿ,ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು, ಕಂದಾಯ ಇಲಾಖೆಸಿಬ್ಬಂದಿ, ಸ್ವಯಂ ಸೇವಕರು ಇರುತ್ತಾರೆ. ನಾಗರಿಕರು ಕೋವಿಡ್‌ಗೆ ಸಂಬಂಧಿಸಿದಂತೆ ತುಮಕೂರು ನಗರ ಶಾಸಕರ ಸ.ಸಂ.:9606461727 ಹಾಗೂ ಮಹಾನಗರ ಪಾಲಿಕೆಕೋವಿಡ್ ವಾರ್ ರೂಂ ಸಂ.:0816-2213401 ಸಂಪರ್ಕಿಸಬಹುದಾಗಿದೆ ಎಂದುತಿಳಿಸಿದ್ದಾರೆ.