Advertisement

ಪೆರ್ಡೂರು: ಪತ್ನಿಗೆ ಚೂರಿಯಿಂದ ಇರಿದು ಕೊಲೆ ಯತ್ನ; ಗಂಡನ ವಿರುದ್ಧ ದೂರು ದಾಖಲು

10:22 PM Jan 18, 2023 | Team Udayavani |

ಹೆಬ್ರಿ : ಪೆರ್ಡೂರು ಗ್ರಾಮದ ವಡ್ಡಮೇಶ್ವರ ಎಂಬಲ್ಲಿ ಗಂಡನೋರ್ವ ಹೆಂಡತಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಜ. 17ರಂದು ನಡೆದಿದೆ.

Advertisement

ಸ್ಥಳೀಯ ನಿವಾಸಿ ಬೇಬಿ (39) ಹಲ್ಲೆಗೊಳಗಾದವರು. ಮಂಗಳವಾರ ರಾತ್ರಿ 8.20ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಬೇಬಿಯವರಿಗೆ ಅವರ ಗಂಡ ಶೇಖರ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಹಲ್ಲೆ ಮಾಡಿದ್ದಲ್ಲದೇ, ಚೂರಿಯಿಂದ ಮುಖಕ್ಕೆ ಹಾಗೂ ಭುಜಕ್ಕೆ ಇರಿದು ತೀವ್ರ ತರದ ಗಾಯವನ್ನುಂಟು ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಬೇಬಿ ಅವರು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪುಂಡರ ಕಡಿವಾಣಕ್ಕೆ ಮಫ್ತಿವೇಷ ಹಾಕಿದ ಕೊರಟಗೆರೆ ಪಿಎಸೈ: 10ಕ್ಕೂ ಅಧಿಕ ಬೈಕ್ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next