ಉಡುಪಿ: ಅಪಘಾತ ವಲಯ ಪೆರಂಪಳ್ಳಿಯ ಸುಂದರಿ ಗೇಟ್ ಬಳಿಯ ತಿರುವಿನಲ್ಲಿ ರವಿವಾರ ತಡರಾತ್ರಿ ಮತ್ತೂಂದು ಅಪಘಾತ ನಡೆದಿದೆ. ಇದೇ ಸ್ಥಳದಲ್ಲಿ ತಿಂಗಳ ಅಂತರದಲ್ಲಿ ನಡೆದ ಎರಡನೇ ಅಪಘಾತ ಇದಾಗಿದೆ.
ರವಿವಾರ ತಡರಾತ್ರಿ ಅಂಬಾಗಿಲು ವಿನಿಂದ ಮಣಿಪಾಲದತ್ತ ತೆರಳುತ್ತಿದ್ದ ಹುಂಡೈ ಐ10 ಕಾರು ಅಪಘಾತಕ್ಕೀಡಾಗಿದೆ. ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಅ.17ರಂದು ಇದೇ ಸ್ಥಳದಲ್ಲಿ ಕಾರೊಂದು ಇದೇ ರೀತಿ ತಂತಿಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತವಾಗಿತ್ತು. ಬಳಿಕ ಹೊಸ ವಿದ್ಯುತ್ ಕಂಬ ಅಳವಡಿಕೆ ಮಾಡಲಾಗಿತ್ತು. ಈಗ ಹೊಸ ಕಂಬಕ್ಕೆ ಕಾರು ಢಿಕ್ಕಿ ಹೊಡೆದಿದ್ದು, ಮತ್ತೂಮ್ಮೆ ಕಂಬ ಬದಲಾಯಿಸುವ ಅಗತ್ಯ ಎದುರಾಗಿದೆ.
ವಿದ್ಯುತ್ ವ್ಯತ್ಯಯ
ಘಟನೆ ನಡೆದ ಸಂದರ್ಭದಲ್ಲಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮೆಸ್ಕಾಂನವರು ವಿದ್ಯುತ್ ನಿಲುಗಡೆಗೊಳಿಸಿದರು. ಇದರಿಂದ ರಾತ್ರಿ ಪೂರ್ತಿ ವಿದ್ಯುತ್ ಇಲ್ಲದೆ ಸ್ಥಳೀಯರು ದಿನ ಕಳೆದರು.
Related Articles
ಅಪಾಯಕಾರಿ ತಿರುವು
ಇದೊಂದು ಅಪಾಯಕಾರಿ ತಿರುವಾಗಿದೆ. ಈ ಭಾಗದಲ್ಲಿ ಸಂಚಾರ ಮಾಡಿದ ಹಲವು ಚಾಲಕರು, ಸವಾರರಿಗೆ ಈ ಬಗ್ಗೆ ಅರಿವಾಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ತಿರುವು ನಿರ್ಮಿಸಿರುವುದರಿಂದ ವೇಗದಿಂದ ಬರುವ ವಾಹನಗಳು ನಿಯಂತ್ರಣ ತಪ್ಪುತ್ತಿವೆ ಎಂದುಬು ಸ್ಥಳೀಯರ ಆತಂಕವಾಗಿದೆ.
ಹಲವು ಅಪಘಾತ
ಈ ಭಾಗದಲ್ಲಿ ಈಗಾಗಲೇ 10ರಿಂದ 12 ಅಪಘಾತಗಳು ನಡೆದಿವೆ. ಈ ಬಗ್ಗೆ ಇದುವರೆಗೂ ಎಚ್ಚರಿಕೆ ಫಲಕವಾಗಲಿ ಸೂಚನ ಫಲಕವನ್ನಾಗಲಿ ಅಳವಡಿಕೆ ಮಾಡಿಲ್ಲ. ಅಪರೂಪಕ್ಕೆ ಬರುವ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿವೆ. ಸ್ಥಳೀಯ ವಾಹನ ಚಾಲಕರಿಗೆ ಈ ಅವೈಜ್ಞಾನಿಕ ತಿರುವಿನ ಮಾಹಿತಿ ಇರುವ ಕಾರಣ ನಿಧಾನವಾಗಿ ವಾಹನ ಚಲಾಯಿಸುತ್ತಾರೆ. ಆದರೆ ಇತರರಿಗೆ ಇದು ಗೊಂದಲಕಾರಿಯಾಗಿ ಪರಿಣಮಿಸುತ್ತಿದೆ.
ಉಬ್ಬುತಗ್ಗು-ಎಚ್ಚರಿಕೆ ಫಲಕ ಅತ್ಯಗತ್ಯ
ಅಪಘಾತಕ್ಕೀಡಾದ ವಾಹನವನ್ನು ಸೋಮವಾರ ಬೆಳಗ್ಗೆ ಹಿಟಾಚಿ ಮೂಲಕ ತೆರವು ಮಾಡಲಾಯಿತು. ಈ ಭಾಗದಲ್ಲಿ ಮತ್ತಷ್ಟು ಭೀಕರ ಅಪಘಾತಗಳು ಉಂಟಾಗುವುದನ್ನು ತಡೆಗಟ್ಟ ಬೇಕಾದರೆ ಶೀಘ್ರವಾಗಿ ಉಬ್ಬುತಗ್ಗು ಹಾಗೂ ಎಚ್ಚರಿಕೆಯುಳ್ಳ ಸೂಚನ ಫಲಕವನ್ನು ಅಳವಡಿಸುವ ಅಗತ್ಯವಿದೆ. ಕಡಿದಾದ ತಿರುವು ಭಾಗದಲ್ಲಿಯೇ ಯೂಟರ್ನ್ ಕಲ್ಪಿಸಿರುವುದೂ ಕೂಡ ಅಪಘಾತಕ್ಕೆ ಕಾರಣವಾಗಿದೆ. ಅತ್ತಕಡೆಯಿಂದ ಬರುವ ವಾಹನಗಳಿಗೆ ಕಡಿದಾದ ಪೊದೆಯಿಂದಾಗಿ ಯಾವುದೇ ವಾಹನಗಳು ಬರುವುದು ಗೋಚರಕ್ಕೆ ಬರುತ್ತಿಲ್ಲ.