Advertisement

Perampalli: ಡಿವೈಡರ್‌ ಮೇಲೇರಿದ ಕಾರು!

01:13 AM Jun 06, 2023 | Team Udayavani |

ಉಡುಪಿ: ಪೆರಂಪಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮ ಗೋದಾಮಿನ ಆವರಣ ಭಾಗದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಡಿವೈಡರ್‌ ಮೇಲೇರಿದ ಘಟನೆ ಸೋಮವಾರ ನಡೆದಿದೆ.

Advertisement

ಕಾರು ಮಣಿಪಾಲದಿಂದ ಅಂಬಾಗಿಲಿನತ್ತ ತೆರಳುತ್ತಿತ್ತು. ಈ ಭಾಗದಲ್ಲಿ ಅಪಾಯಕಾರಿ ತಿರುವು ಇದ್ದು, ಇತ್ತೀಚೆಗಷ್ಟೇ ರಾತ್ರಿ ವೇಳೆ ಅಪರಿಚಿತರು ಆವರಣ ಗೋಡೆಯನ್ನು ನೆಲಸಮ ಮಾಡಿದ್ದರು. ವಾಹನ ಸವಾರರಿಗೆ ಅನುಕೂಲವಾಗುವಂತೆ ತಿರುವು ಹಾಗೂ ಸಿಗ್ನಲ್‌ಗ‌ಳ ಅಳವಡಿಕೆ ಮಾಡಿದರಷ್ಟೇ ಈ ಭಾಗದಲ್ಲಿ ಸುಗಮ ಸಂಚಾರ ಸಾಧ್ಯವಾಗಲಿದೆ.

ಇಲ್ಲದಿದ್ದರೆ ಮಳೆಗಾಲದ ಸಂದರ್ಭ ಮತ್ತಷ್ಟು ಅನಾಹುತ ಎದುರಾಗುವ ಸಾಧ್ಯತೆಗಳಿವೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next