Advertisement
ಗುರುವಾರ ನಸುಕಿನ ವೇಳೆ ಬೆಂಕಿ ತಗಲಿರುವ ಸಾಧ್ಯತೆ ಇದ್ದು, ಘಟನೆಗ ಕಾರಣ ತಿಳಿದು ಬಂದಿಲ್ಲ. ನಗರಾಡಳಿತ, ಅಗ್ನಿಶಾಮಕ ದಳದ ವತಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಜೆಸಿಬಿ ಯಂತ್ರಗಳ ಮೂಲಕ ತ್ಯಾಜ್ಯ ರಾಶಿ ಮೇಲೆ ಮಣ್ಣು ಸುರಿಯಲಾಗುತ್ತಿದೆ. ಕಾಡಿಗೆ ಬೆಂಕಿ ಹಬ್ಬದಂತೆ ಎಚ್ಚರಿಕೆ ವಹಿಸಲಾಗಿದೆ. ನೀರು ಹಾಯಿಸಲು ಟ್ಯಾಂಕರ್ ಬಳಸಲಾಗಿದೆ.
ಹತ್ತಿರದ ಕಾಡಿಗೆ ಹಬ್ಬುವ ಮೊದಲು ರಕ್ಷಣಾ ಕಾರ್ಯ ನಡೆದ ಕಾರಣ ಅನಾಹುತ ವೊಂದು ತಪ್ಪಿತ್ತು. ಬೆಂಕಿ ಹಬ್ಬದಂತೆ ಸುತ್ತಲೂ ಅಗಳು ನಿರ್ಮಿಸಲಾಗಿದೆ. ಮಣ್ಣು ಹಾಕಲಾ ಗುತ್ತಿದೆ. ಆದರೆ ಭಾರೀ ಪ್ರಮಾಣದ ತ್ಯಾಜ್ಯ, ಪ್ಲಾಸ್ಟಿಕ್ ತುಂಬಿ ರುವ ಕಾರಣ ಮೇಲ್ಭಾಗದಲ್ಲಿ ಬೆಂಕಿ ಹತೋಟಿಗೆ ಬಂದರೂ ತ್ಯಾಜ್ಯ ರಾಶಿಯ ಮಧ್ಯಭಾಗದಿಂದ ಬೆಂಕಿ ಕಾಣಿಸು ಕೊಳ್ಳುತ್ತಿದೆ. ನಿಯಂತ್ರಣ ಕ್ರಮದ ಮಧ್ಯೆ ಹಠಾತ್ ಬೆಂಕಿ ಕಾಣಿಸಿಕೊಂಡ ಕಾರಣ ಅಗ್ನಿಶಾಮಕ ದಳದ ವಾಹನ ಕರೆಯಿಸಿ ಬೆಂಕಿ ನಂದಿಸಲಾಯಿತು. ಪ್ಲಾಸ್ಟಿಕ್‌ಗೆ ಬೆಂಕಿ ತಗಲಿರುವ ಕಾರಣ ನಿಯಂತ್ರಣ ಸವಾಲಾಗಿದೆ.
Related Articles
ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯದ ಪ್ರಮಾಣ ಮಿತಿಗಿಂತ ಅಧಿಕವಾಗಿದ್ದ ಕಾರಣ ಕೆಲ ತಿಂಗಳ ಹಿಂದೆ ಕಸ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಹಸಿ, ಒಣ ಕಸ, ಪ್ಲಾಸ್ಟಿಕ್ ಪ್ರತ್ಯೇಕಿಸದೆ ಎಲ್ಲವನ್ನೂ ಡಂಪ್ ಮಾಡಲಾಗುತ್ತಿತ್ತು. ಇದರಿಂದ ಮಳೆಗಾಲದಲ್ಲಿ ತ್ಯಾಜ್ಯ ನೀರು ಪಯಸ್ವಿನಿ ಪಾಲಾಗುತ್ತಿತ್ತು. ಹತ್ತಿರದ ನಿವಾಸಿಗಳಿಗೆ ರೋಗ ಭೀತಿ ಉಂಟಾಗಿತ್ತು. ನ.ಪಂ., ಆಲೆಟ್ಟಿ ಗ್ರಾ.ಪಂ. ಸಭೆಗಳಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಕೊನೆಗೆ ನನಗರ ಪಂಚಾಯತ್ ಕಸ ಪೂರೈಕೆ ಸ್ಥಗಿತಗೊಳಿಸಿ ನ.ಪಂ. ಕಚೇರಿ ಆವರಣದಲ್ಲಿ ಕಸ, ತ್ಯಾಜ್ಯ ಸಂಗ್ರಹಿಸಲಾಗಿತ್ತು.
Advertisement
ನಿಯಂತ್ರಣಕ್ಕೆ ಕ್ರಮಎರಡು ಜೆಸಿಬಿ, ಹಿಟಾಚಿ ಬಳಸಿ ಬೆಂಕಿ ಹಬ್ಬಿರುವ ಪ್ರದೇಶಕ್ಕೆ ಮಣ್ಣು ಹಾಕಲಾಗುತ್ತಿದೆ. ಅಗ್ನಿಶಾಮಕ ದಳ, ಟ್ಯಾಂಕರ್ ನೀರು ಬಳಸಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಪ್ಲಾಸ್ಟಿಕ್‌ಗೆ ಬೆಂಕಿ ತಗಲಿರುವ ಕಾರಣ ನಿಯಂತ್ರಣ ಸ್ವಲ್ಪ ಕಠಿನವಾಗಿದೆ. ಫೆ. 4ರಂದು ಖಾಸಗಿ ಸಂಸ್ಥೆಯೊಂದು ಹಸಿ ಕಸ ಖರೀದಿಗೆ ಮುಂದಾಗಿದ್ದು, ವಿಂಗಡಣೆ ಬಳಿಕ ವಿಲೇವಾರಿಗೆ ಯೋಜನೆ ರೂಪಿಸಿದ್ದೆವು. ಅದು ಪೂರ್ಣಗೊಳ್ಳುವ ಮೊದಲೇ ಬೆಂಕಿ ತಗುಲಿದೆ.
– ಮತ್ತಡಿ
ಮುಖ್ಯಾಧಿಕಾರಿ, ನ.ಪಂ. ಸುಳ್ಯ