Advertisement
17 ರಾಜ್ಯಗಳ, ಎಲ್ಲ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 6,548 ರಷ್ಟುತಾಲೂಕು, ಹಳ್ಳಿಗಳು, ಹೋಬಳಿಗಳು, ಕುಗ್ರಾಮಗಳಲ್ಲಿ ಕೇಂದ್ರ ಅಂತರ್ಜಲ ಮಂಡಳಿ 2013ರಲ್ಲಿ ನಡೆಸಿರುವ ಸಮೀಕ್ಷಾ ವರದಿಯಲ್ಲಿ 4,520 ಪ್ರಾಂತ್ಯಗಳಲ್ಲಿನ ಅಂತರ್ಜಲದ ಮಟ್ಟ ಸುಸ್ಥಿತಿಯಲ್ಲಿವೆ. 1,034 ಪ್ರಾಂತ್ಯಗಳಲ್ಲಿ ಅಂತರ್ಜಲವನ್ನು ಮಿತಿ ಮೀರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. 681 ತಾಲೂಕು, ಹಳ್ಳಿ ಮಟ್ಟದ ಪ್ರಾಂತ್ಯಗಳಲ್ಲಿನ ಅಂತರ್ಜಲ ಮಟ್ಟ ಭಾಗಶಃ ಶೋಚನೀಯ ಮಟ್ಟ ತಲುಪಿದ್ದರೆ, 253 ಪ್ರಾಂತ್ಯಗಳಲ್ಲಿ ಶೋಚನೀಯ ಪರಿಸ್ಥಿತಿ ತಲುಪಿದೆ ಎಂದು ಹೇಳಲಾಗಿದೆ. ಆದರೆ ಇಡೀ ವರದಿಯಲ್ಲಿ ಕರ್ನಾಟಕದಲ್ಲಿನ ತಾಲೂಕು, ಹಳ್ಳಿಗಳ ಪರಿಸ್ಥಿತಿಯ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ.
ಜಲ ಸಂರಕ್ಷಣೆಗಾಗಿ ನೀತಿ ಆಯೋಗವು ಈ ಹಿಂದೆ ಎಲ್ಲ ರಾಜ್ಯಗಳಿಗೆ ಸೂಚಿಸಿದ್ದ ಕ್ರಮಗಳನ್ನು ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳು ಮಾತ್ರ ಅಳವಡಿಸಿಕೊಂಡಿದ್ದು, ಇನ್ನುಳಿದ ರಾಜ್ಯಗಳು ನೀತಿ ಆಯೋಗದ ಕಿವಿಮಾತನ್ನು ಗಾಳಿಗೆ ತೂರಿ ಈಗ ಪಡಿಪಾಟಿಲು ಪಡುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸಮರ್ಥ ಜಲ ಸಂವರ್ಧನೆಗೆ ಕೆಲವಾರು ಕ್ರಮಗಳನ್ನು ನೀತಿ ಆಯೋಗ ಸೂಚಿಸಿತ್ತು. ಮಳೆ ದೃಶ್ಯಗಳಿಗೆ ಕತ್ತರಿ!
ಹನಿ ನೀರಿಗೂ ಪರದಾಡುವಂತಾಗಿರುವ ಚೆನ್ನೈ ಯಲ್ಲಿರುವ ತಮಿಳು ಚಿತ್ರೋದ್ಯಮದಲ್ಲಿ ಈಗ ಸಿನೆಮಾಗಳಲ್ಲಿ ಮಳೆ ದೃಶ್ಯಗಳನ್ನು ಚಿತ್ರಿಸಲೂ ನೀರಿಲ್ಲದ ಪರಿಸ್ಥಿತಿ ಉದ್ಭವವಾಗಿದೆ. ಹಾಗಾಗಿ ಸಿನೆಮಾಗಳಲ್ಲಿ ಮಳೆ ದೃಶ್ಯಗಳನ್ನೇ ಬದಲಾಯಿಸಲು ಅನೇಕ ನಿರ್ಮಾಪಕರು, ನಿರ್ದೇಶಕರು ನಿರ್ಧರಿಸಿದ್ದಾರೆ.