Advertisement

ಕಾಳು ಮೆಣಸು ಧಾರಣೆ ಚೇತರಿಕೆ

10:31 PM Oct 26, 2021 | Team Udayavani |

ಪುತ್ತೂರು: ಪಾತಾಳದತ್ತ ಮುಖ ಮಾಡಿದ್ದ ಕಾಳುಮೆಣಸು ಧಾರಣೆ ಒಂದು ವಾರದಿಂದ ಏರಿಕೆ ಕಾಣುತ್ತಿದ್ದು, ಚೇತರಿಕೆಯ ನಿರೀಕ್ಷೆ ಮೂಡಿಸಿದೆ.

Advertisement

ಕೇರಳದಲ್ಲಿನ ವಿಪರೀತ ಮಳೆ, ಶ್ರೀಲಂಕಾದಲ್ಲಿ ಉತ್ಪಾದನೆ ಕುಸಿತ, ವಿಯೆಟ್ನಾಂನ ಬೆಳೆ ಬದಲಾವಣೆ ಧಾರಣೆ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಸದ್ಯದ ದರ ಏರಿಕೆ ಗಮನಿಸಿದರೆ ಕೆಲವು ದಿನಗಳಲ್ಲಿ ಕೆಜಿಗೆ 500 ರೂ.ಗೆ ತಲುಪುವ ಸಾಧ್ಯತೆ ಇದೆ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು.

ಕ್ಯಾಂಪ್ಕೋದಲ್ಲಿ 440 ರೂ.ಅ. 26ರಂದು ಕ್ಯಾಂಪ್ಕೋದಲ್ಲಿ ಕೆಜಿ ಕಾಳುಮೆಣಸಿಗೆ 440 ರೂ. ಇತ್ತು. ಎರಡು ದಿನಗಳ ಹಿಂದೆ 430 ರೂ. ಇದ್ದ ದರದಲ್ಲಿ 10 ರೂ. ಏರಿಕೆ ಕಂಡಿದೆ. ಹೊರ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ದರಕ್ಕಿಂತ 15-20 ರೂ. ಹೆಚ್ಚು ಇದೆ.

ಮಾರುಕಟ್ಟೆಗೆ ಅತೀ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೊರತೆ ಪ್ರಮಾಣ ನೀಗಿಸಲು ಧಾರಣೆ ಏರಿಸಿ ಬೆಳೆಗಾರರನ್ನು ಸೆಳೆಯುವ ತಂತ್ರಗಾರಿಕೆ ನಡೆಯುತ್ತಿದೆ. ಕೆಲವು ಮೂಲಗಳ ಪ್ರಕಾರ ಡಿಸೆಂಬರ್‌ ಒಳಗೆ ಧಾರಣೆ 600 ರೂ. ತಲುಪುವ ಸಾಧ್ಯತೆ ಇಲ್ಲದಿಲ್ಲ. ಏಕೆಂದರೆ ಸಾಗರ, ಕೋಣಂದೂರು, ಸಿದ್ದಾಪುರ, ಮುಂತಾದ ಕಡೆಯ ವ್ಯಾಪಾರಿಗಳು ಕಾಳುಮೆಣಸು ಖರೀದಿಸಿ ದಾಸ್ತಾನಿಗೆ ಮುಂದಾಗಿದ್ದಾರೆ.

ಇದನ್ನೂ ಓದಿ:ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

Advertisement

ಬೇಡಿಕೆ ಹೆಚ್ಚಳ
ಮುಖ್ಯವಾಗಿ ಲಾಕ್‌ಡೌನ್‌ ಬಳಿಕ ಕಾಳು ಮೆಣಸು ಆಧಾರಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದು ಕೂಡ ಬೇಡಿಕೆ ಹೆಚ್ಚಳಕ್ಕೆ ಪೂರಕವಾಗಿದೆ. ವಿದೇಶಗಳಿಂದಲೂ ಭಾರತದ ಕಾಳು ಮೆಣಸಿಗೆ ಬೇಡಿಕೆ ಉಂಟಾಗಿದ್ದು, ರಪು¤ ಉದ್ದೇಶಕ್ಕೂ ಮೆಣಸಿನ ಅಗತ್ಯ ಇದೆ. ದೇಶ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸು ಉತ್ಪಾದನೆ ಯಾಗುವ ರಾಜ್ಯಗಳೆಂದರೆ ಕರ್ನಾಟಕ. ಅನಂತರ ಕೇರಳ, ತಮಿಳುನಾಡು. ಕೇರಳ, ತಮಿಳುನಾಡಿನ ಮೆಣಸು ಬೆಳೆಯುವ ಪ್ರದೇಶ ಗಳಲ್ಲಿ ಮಳೆಯಿಂದಾಗಿ ಹಾನಿ ಸಂಭವಿ ಸಿದೆ. ಇಲ್ಲಿ ಮೊದಲೇ ಉತ್ಪಾದನೆ ಕಡಿಮೆ ಯಿದ್ದು, ಮಳೆಯಿಂದ ಮತ್ತಷ್ಟು ಇಳಿಮುಖ ಗೊಂಡಿದೆ. ಕರ್ನಾಟಕದಲ್ಲೂ ಮಳೆ ಕಾರಣ ದಿಂದ ಶೇ. 25ರಷ್ಟು ಬೆಳೆ ನಷ್ಟವಾಗುವ ಭೀತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next