Advertisement

ವಿನಯ್‌ ರಾಜ್‌ಕುಮಾರ್‌ “ಪೆಪೆ”ಲುಕ್‌ಗೆ ಮೆಚ್ಚುಗೆ

07:30 PM May 09, 2022 | Team Udayavani |

ವಿನಯ್‌ ರಾಜ್‌ಕುಮಾರ್‌ ನಟಿಸಿರುವ “ಪೆಪೆ’ ಚಿತ್ರದ ಝಲಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Advertisement

ವಿನಯ್‌ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಈ ಝಲಕ್‌ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಸ್‌ ಡೈಲಾಗ್‌ ನಿಂದ ಶುರುವಾಗುವ ಝಲಕ್‌ ನಲ್ಲಿ ಹಲವು ಪಾತ್ರಗಳನ್ನು ಪರಿಚಯಿಸಲಾಗಿದ್ದು, ವಿನಯ್‌ ರಗಡ್‌ ಲುಕ್‌ನಲ್ಲಿ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್‌ ಸ್ಟಾರ್‌ ಕಥೆಯಾಗಿರುವ “ಪೆಪೆ’ ಸಿನಿಮಾ ಸಂಪೂರ್ಣವಾಗಿ ಹಳ್ಳಿ ಸೊಗಡಿನ ಆಕ್ಷನ್‌ ಸಿನಿಮಾವಾಗಿದ್ದು, ಶ್ರೀಲೇಶ್‌ ಎಸ್‌. ನಾಯರ್‌ ನಿರ್ದೇಶನದ ಈ ಸಿನಿಮಾವನ್ನು ಉದಯ್‌ ಶಂಕರ್‌ ಎಸ್‌. ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ನವೀನ್‌ ಕುಮಾರ್‌ ಛಾಯಾಗ್ರಹಣ ಸಿನಿಮಾಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next