Advertisement

ಜನಸೇವೆಯೇ ಜನಪ್ರತಿನಿಧಿಗಳ ಆದ್ಯತೆಯಾಗಲಿ

11:33 AM Dec 04, 2022 | Team Udayavani |

ರೋಣ: ಜನಪ್ರತಿನಿಧಿಗಳು ಚುನಾವಣೆಗಳಲ್ಲಿ ಮಾತ್ರ ರಾಜಕೀಯ ಮಾಡಬೇಕು. ನಂತರ ಜನಸೇವೆ ಮೂಲಕ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕೆಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ತಾಲೂಕಿನ ಡ.ಸ.ಹಡಗಲಿ ಗ್ರಾಮದಲ್ಲಿ 20 ಲಕ್ಷ ರೂ. ಅನುದಾನದಲ್ಲಿ 2021-22ನೇ ಸಾಲಿನ ಡ.ಸ. ಹಡಗಲಿ ಗ್ರಾಮದ ಬಳಿಯ ಹಳ್ಳಕ್ಕೆ ಚೆಕ್‌ ಡ್ಯಾಂ ಮತ್ತು ಬ್ರಿಡ್ಜ್ ನಿರ್ಮಾಣ ಕಾಮಗಾರಿ, 50 ಲಕ್ಷ ರೂ. ವೆಚ್ಚದ ಡ.ಸ. ಹಡಗಲಿ ಹೊನ್ನಾಪುರ ರಸ್ತೆ ಕಾಮಗಾರಿ, 45 ಲಕ್ಷ ರೂ. ವೆಚ್ಚದ ಡ.ಸ. ಹಡಗಲಿ-ಸವಡಿ ಒಳ ರಸ್ತೆ ಕಾಮಗಾರಿ, 20 ಲಕ್ಷ ರೂ. ವೆಚ್ಚದ ಆಶ್ರಯ ಕಾಲೋನಿ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ, 8 ಲಕ್ಷ ರೂ. ವೆಚ್ಚದ ಡ.ಸ. ಹಡಗಲಿ ಗ್ರಾಮದ ಎಸ್‌ಸಿ ಕಾಲೋನಿ ಶಾಲಾ ರಸ್ತೆಯಿಂದ ಹೊಸ ಗ್ರಾಪಂ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, 5 ಲಕ್ಷ ರೂ. ವೆಚ್ಚದ ಗ್ರಾಮದ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ, 5 ಲಕ್ಷ ರೂ. ವೆಚ್ಚದ ಗ್ರಾಮದ ಶ್ರೀ ಮಾರುತಿ ಭಜನಾ ಸಂಘ ಸಮುದಾಯ ಭವನ ನಿರ್ಮಾಣ ಕಾಮಗಾರಿ ಹಾಗೂ ಗುಜಮಾಗಡಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಿಂದ ಹೊಸಮನಿಯವರ ಮನೆ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, 5 ಲಕ್ಷ ರೂ. ವೆಚ್ಚದ ದ್ಯಾಮವ್ವದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಜೆಡಿಎಸ್‌ ಮುಂದೆ ಮಂಡಿಯೂರಿ ಸರ್ಕಾರ ರಚಿಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನೊಂದಿಗೆ ಅಪವಿತ್ರವಾಗಿ ರಚಿಸಿದ ಮೈತ್ರಿ ಸರ್ಕಾರ ಬಹಳ ದಿನ ಉಳಿಯಲಿಲ್ಲ. ನಂತರ ಯಡಿಯೂರಪ್ಪನವರ ಸರ್ಕಾರ ಆಡಳಿತಕ್ಕೆ ಬಂದಿತು ಎಂದು ಹೇಳಿದರು.

ಬಿಜೆಪಿಗೂ ಮಳೆಗೂ ಅವಿನಾಭಾವ ಸಂಬಂಧ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರವಾಹ ಉಂಟಾಗುತ್ತದೆ. ಅದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬರಗಾಲ ಉಂಟಾಗುತ್ತದೆ. ಪ್ರವಾಹ ಸಂದರ್ಭದಲ್ಲಿ ಹಾನಿಗೀಡಾದ ಮನೆಗಳಿಗೆ 5 ಲಕ್ಷ ರೂ. ನೀಡಿದೆವು. ದನಕರುಗಳಿಗೆ ಮೇವು ನೀಡಿದೆವು. ಪ್ರವಾಹದಿಂದ ಹೊರಬರುವಷ್ಟರಲ್ಲಿ ಕೊರೊನಾ ಮಹಾಮಾರಿ ಜಗತ್ತನ್ನು ಆವರಿಸಿತು. ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಿದ ಸರ್ಕಾರ ನಮ್ಮ ಬಿಜೆಪಿ ಸರ್ಕಾರ ಎಂದರು.

ನರಗುಂದ ಮತಕ್ಷೇತ್ರದಲ್ಲಿ ಈಗ ಸುಮಾರು 900 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ನಂತರ ಎಲ್ಲರೂ ಅಭಿವೃದ್ಧಿ ಕಾರ್ಯ ಮತ್ತು ಜನಸೇವೆ ಮಾಡಬೇಕೆಂದರು.

Advertisement

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಹುಲ್ಲೂರ, ಮೀನಾಕ್ಷಮ್ಮ ಚಲವಾದಿ, ವಸಂತ ಮೇಟಿ, ಶಿವಲೀಲಾ ರಂಗಾಪುರ, ರೇಣಮ್ಮ ಕಪ್ಲಿ, ಗಂಗಾದರ ಕಮ್ಮಾರ, ಬಿ.ಎಫ್‌.ಚೇಗರೆಡ್ಡಿ, ನಿಂಗಪ್ಪ ಮನ್ನೂರ, ಪ್ರದೀಪ ನವಲಗುಂದ. ಎಸ್‌.ಬಿ. ಮೇಟಿ, ಶರಣಪ್ಪ ಪಟ್ಟೇದ, ಚಿದಾನಂದ ದಾನರೆಡ್ಡಿ, ಗುರಶಾಂತ ಸೂಡಿ, ಸುರೇಶ ಹೂಗಾರ ಇತರರು ಪಾಲ್ಗೊಂಡಿದ್ದರು.

ಬಿಜೆಪಿಗೂ ಮಳೆಗೂ ಅವಿನಾಭಾವ ಸಂಬಂಧ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರವಾಹ ಉಂಟಾಗುತ್ತದೆ. ಅದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬರಗಾಲ ಉಂಟಾಗುತ್ತದೆ. -ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು

 

Advertisement

Udayavani is now on Telegram. Click here to join our channel and stay updated with the latest news.

Next