Advertisement
ದ್ರವ ರೂಪದ ಬಂಗಾರವಾಗಿರುವ ಪೆಟ್ರೋಲ್, ಡಿಸೇಲ್ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.ದುಬಾರಿ ರಸ್ತೆ ತೆರಿಗೆಯಿರುವುದರಿಂದ ಇದಕ್ಕೆಪರ್ಯಾವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಎಲೆಕ್ಟ್ರಿಕ್‌ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.ಮನೆಯಿಂದ ಕಚೇರಿ, ಒಂದಿಷ್ಟು ಮಾರುಕಟ್ಟೆಗೆ ಓಡಾಡುವವರುಇ-ವಾಹನಗಳತ್ತ ಮುಖ ಮಾಡುತ್ತಿದ್ದಾರೆ. 90ರೂ. ಒಂದು ಲೀಟರ್ ಪೆಟ್ರೋಲ್ ಹಾಕಿಸುವಬದಲು 20-25 ರೂ.ನಲ್ಲಿ 80-100 ಕಿ.ಮೀ. ದೂರಕ್ರಮಿಸಬಹುದಾಗಿದೆ. ನಿರ್ವಹಣೆ ದೃಷ್ಟಿಯಿಂದ ಪೆಟ್ರೋಲ್ ವಾಹನಗಳಿಗಿಂತ ಇದು ಅತ್ಯಂ ಸರಳವಾಗಿರುವುದರಿಂದ ನಗರ ವಾಸಿಗಳು ಇ-ಸ್ಕೂಟರ್‌ಗಳಿಗೆ ಮನ ಸೋಲುತ್ತಿದ್ದಾರೆ.
Related Articles
Advertisement
ಪೂರಕ ವ್ಯವಸ್ಥೆ ಅಗತ್ಯ :
ಈಗಾಗಲೇ ಸಾರ್ವಜನಿಕರು ಇ-ವಾಹನಗಳ ಬಳಕೆಗೆ ಮನಸ್ಸು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವ್ಯವಸ್ಥೆಗಳನ್ನು ನೀಡುವಲ್ಲಿ ಸರಕಾರ ಕಾಳಜಿ ತೋರುತ್ತಿಲ್ಲ. ಆರಂಭದಲ್ಲಿ ದ್ವಿಚಕ್ರ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಕಾರುಗಳು ಇನ್ನೂಮಹಾನಗರಕ್ಕೆ ಕಾಲಿಟ್ಟಿಲ್ಲ. ಆದರೆ ಬೆಂಗಳೂರು, ಮಂಗಳೂರುದಂತಹ ನಗರಗಳಿಂದಕಾರುಗಳನ್ನು ಖರೀದಿಸಿ ಇಲ್ಲಿ ನೋಂದಣಿ ಮಾಡಿಸಲಾಗುತ್ತಿದೆ. ಬೇಕಾದ ಚಾರ್ಜಿಂಗ್ ಕೇಂದ್ರಗಳ ಆರಂಭಕ್ಕೆ ಇನ್ನೂ ಚಿಂತನೆ ನಡೆದಿಲ್ಲ. ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದರೆ ಇ-ವಾಹನಗಳ ಬಳಕೆದಾರರ ಪ್ರಮಾಣ ಹೆಚ್ಚಲಿದೆ.
ಇ-ವಾಹನಗಳಿಗೆ ಉತ್ತೇಜನ ನೀಡಲಿ :
ಹು-ಧಾ ಮಹಾನಗರ ಸ್ಮಾರ್ಟ್ ನಗರವಾಗಿ ರೂಪಗೊಳ್ಳುತ್ತಿದೆ. ಕೇವಲ ಕಟ್ಟಡಗಳನ್ನು ನಿರ್ಮಿಸುವುದೇ ಸ್ಮಾರ್ಟ್‌ಸಿಟಿ ಯೋಜನೆಯಲ್ಲ. ಸ್ವತ್ಛ, ಸ್ವಸ್ಥ ಹಾಗೂ ಪರಿಸರ ಸ್ನೇಹಿ ಮಹಾನಗರದ ಬಗ್ಗೆ ಚಿಂತನೆ ನಡೆಸಬೇಕಿದೆ. ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿಇ-ವಾಹನಗಳ ಖರೀದಿಗೆ ಜನರಿಗೆ ಉತ್ತೇಜನ ನೀಡುವುದು ಬಹು ಮುಖ್ಯ. ಭುವನೇಶ್ವರನಗರದಲ್ಲಿ ಇ-ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಮಾದರಿ ಯೋಜನೆಯಾಗಿದೆ. ಈ ಕಾರ್ಯ ಹು-ಧಾ ಮಹಾನಗರದಲ್ಲಿ ಪರಿಣಾಮಕಾರಿಯಾಗಿ ಆಗಬೇಕಿದೆ.
ಪೆಟ್ರೋಲ್ ದರ ಏರಿಕೆ, ರಸ್ತೆ ತೆರಿಗೆ ವಿನಾಯಿತಿ, ಪರಿಸರರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಜನರು ಕೂಡ ವಾಹನಗಳ ಬಗ್ಗೆ ಹೆಚ್ಚೆಚ್ಚುವಿಚಾರಿಸುತ್ತಿದ್ದಾರೆ. ನಮ್ಮಲ್ಲಿ 43 ಸಾವಿರ ರೂ.ದಿಂದ ದರ ಆರಂಭವಾಗುತ್ತದೆ. ನಗರವಾಸಿಗಳಿಗೆ ಹೇಳಿ ಮಾಡಿಸಿದ ವಾಹನಗಳಾಗಿವೆ. ಸುಖದೇವಸಿಂಗ್ ಛೆಡ್ಡಾ, ಎಂಡಿ, ಛೆಡ್ಡಾ ಆಟೋ ಎಲೆಕ್ಟ್ರಿಕ್
ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿರ್ವಹಣಾ ಸಾಕಷ್ಟು ಕಡಿಮೆಯಿದೆ. ಅ ಧಿಕೃತಮೆಕ್ಯಾನಿಕ್‌ಗಳಿಂದ ಸರ್ವಿಸ್ ಲಭ್ಯವಿದೆ. ಅಗತ್ಯ ಬಿಡಿಭಾಗಗಳಿಗೆ ಸಮಸ್ಯೆಯಿಲ್ಲ. ಆರ್‌ಟಿಒ ನೋಂದಣಿ ವಿನಾಯಿತಿ ಇರುವಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅರವಿಂದ ಪೂಜಾರ,ಬನಶಂಕರಿ ಎಂಟರ್‌ಪ್ರೈಸೆಸ್
ಪೆಟ್ರೋಲ್ ಬೆಲೆ ಇಷ್ಟೊಂದುದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ಎನ್ನಿಸುತ್ತಿದೆ. ನಿರ್ವಹಣೆ ಕಡಿಮೆ, 15-20 ರೂ.ನಲ್ಲಿ 60-80 ಕಿ.ಮೀ. ಓಡಾಡಬಹುದು. ನಿತ್ಯ ಮನೆ, ಕಚೇರಿ ಹಾಗೂ ಒಂದಿಷ್ಟು ಮಾರುಕಟ್ಟೆಗೆ ಅತ್ಯುಪಯುಕ್ತವಾಗಿದೆ. ಹೀಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುತ್ತಿದ್ದೇನೆ. –ಸಂದೇಶ ಕುಲಕರ್ಣಿ, ಉದ್ಯೋಗಿ
–ಹೇಮರಡ್ಡಿ ಸೈದಾಪುರ