Advertisement

ಲಾಕ್‌ಡೌನ್‌ಗೆ ಹೊಂದಿಕೊಳ್ಳುತ್ತಿರುವ ಜನ

01:23 PM Mar 28, 2020 | Suhan S |

ಬೀದರ: ಕೇಂದ್ರ ಸರ್ಕಾರ ಹೇರಿರುವ ಇಡೀ “ಭಾರತ ಲಾಕ್‌ಡೌನ್‌’ಗೆ ಶುಕ್ರವಾರ ಮೂರನೇ ದಿನವಾಗಿದ್ದು, ಕೋವಿಡ್ 19 ಸೋಂಕಿನ ಭೀತಿಯಲ್ಲಿರುವ ಗಡಿ ಜಿಲ್ಲೆ ಬೀದರನ ಜನ ಕರ್ಫ್ಯೂಗೆ ಹೊಂದಿಕೊಳ್ಳುತ್ತಿದ್ದಾರೆ. ಅವಶ್ಯಕ ವಸ್ತುಗಳ ಖರೀದಿಗೆ ಮಾತ್ರ ಜನರು ಹೊರಗೆ ಬರುತ್ತಿದ್ದು, ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.

Advertisement

ಕೊರೊನಾ ನಿಯಂತ್ರಣಕ್ಕೆ ದಿನ ಕಳೆದಂತೆ ಜಿಲ್ಲಾಡಳಿತ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ. ಬೀದರ ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಗೆ ಹೊಂದಿಕೊಂಡಿರುವುದರಿಂದ ಚೆಕ್‌ ಪೋಸ್ಟ್‌ಗಳಲ್ಲಿ ಹೊರ ಜಿಲ್ಲೆ, ರಾಜ್ಯದ ಜನರ ಪ್ರವೇಶವನ್ನು ರದ್ದುಗೊಳಿಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.

ಜಿಲ್ಲೆಯಾದ್ಯಂತ ಎಲ್ಲ ಬಗೆಯ ಉದ್ಯಮಗಳು ಬಂದ್‌ ಆಗಿದ್ದು, ಎಂದಿನಂತೆ ಅವಶ್ಯಕವಾಗಿರುವ ಸಾಮಗ್ರಿಗಳು ಖರೀದಿಸಲು ಕಿರಾಣಿ, ಔಷಧ ಅಂಗಡಿ ಮತ್ತು ತರಕಾರಿ ಮಾರಾಟಕ್ಕೆ ವಿನಾಯಿತಿನೀಡಲಾಗಿದೆ. ಈ ಸ್ಥಳಗಳಲ್ಲಿ ಖರೀದಿಗಾಗಿ ಜನಜಂಗುಳಿಯೇ ಸೇರದಂತೆ ವ್ಯಾಪಕ ಕ್ರಮ ವಹಿಸಲಾಗಿದೆ. ಅನಾವಶ್ಯಕವಾಗಿ ಜನರು ಸಂಚರಿಸುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಗಣಿಸಿದ್ದು, ಅನಿವಾರ್ಯ ಪರಿಸ್ಥಿತಿ ವೇಳೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಇದೇ ಸ್ಥಿತಿ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿಯೂ ಮುಂದುವರಿದಿದೆ. ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ.

ಗ್ರಾಮಗಳಿಗೆ ದಿಗ್ಬಂಧನ: ಕೋವಿಡ್ 19 ಸೋಂಕು ತಮ್ಮ ಹಳ್ಳಿಗಳಿಗೆ ವ್ಯಾಪಿಸದಂತೆ ಜಿಲ್ಲೆಯಲ್ಲಿ ಶುಕ್ರವಾರ ಮತ್ತಷ್ಟು ಗ್ರಾಮಗಳು ದಿಗ್ಬಂಧನ ಹಾಕಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next