Advertisement

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

02:06 AM May 18, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹಾಗೂ ಅವರ ಪಕ್ಷವು ಎಲ್ಲೇ ಪ್ರಚಾರಕ್ಕೆ ಹೋದರೂ ಜನರಿಗೆ “ಬಾಟಲಿ’ ಕಣ್ಣ ಮುಂದೆ ಬರುತ್ತದೆ. ಅಂದರೆ, ಅವರ ಅಬಕಾರಿ ಹಗರಣ ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೇವಡಿ ಮಾಡಿದ್ದಾರೆ.

Advertisement

ಪಂಜಾಬ್‌ನ ಅಮೃತಸರದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಜನರಿಗೆ ಕೇಜ್ರಿವಾಲ್‌ರನ್ನು ನೋಡಿದಾಗ ದೊಡ್ಡ ಬಾಟಲಿ ನೆನಪಾಗುತ್ತದೆ. ನನಗೆ ವೋಟ್‌ ನೀಡಿದರೆ ಮತ್ತೆ ಜೈಲಿಗೆ ಹೋಗುವ ಪ್ರಸಂಗವಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ ಚುನಾವಣೆಯ ಗೆಲುವು, ಸೋಲಿನ ಮೇಲೆ ಅಪರಾಧ ನಿರ್ಧರಿಸುವುದಿಲ್ಲ ಎಂದರು. ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್‌ ಅವರ ಉತ್ತರ, ದಕ್ಷಿಣ ವಿಭಜನೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾ, ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಎನ್ನುವುದು ಅತ್ಯಂತ ಖಂಡನೀಯ. ಈ ದೇಶವನ್ನು ಮತ್ತೆ ವಿಭಜಿಸಲಾಗದು ಎಂದಿದ್ದಾರೆ.

ಕರ್ನಾಟಕದಲ್ಲಿ ಅತೀದೊಡ್ಡ ಪಕ್ಷ: ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಈ ಐದು ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next