ಮಹದೇವಪುರ: ಪ್ರಜಾಪ್ರಭುತ್ವದಲ್ಲಿ ನಾಗರಿಕರನ್ನು ಒಳಗೊಂಡಂತೆ ಅಭಿವೃದ್ಧಿ ಕೈಗೊಳ್ಳುವುದು ಬಿಜೆಪಿಯ ಧ್ಯೇಯವಾಗಿದೆ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
ಚಿತ್ರನಟಿ ತಾರಾ ಹಾಗೂ ದಲಿತ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಸೋಮವಾರ ಕ್ಷೇತ್ರದ ಕಾಡುಗುಡಿ ವಾರ್ಡ್‌ಲ್ಲಿ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಿದ ಏಕೈಕ ಪಕ್ಷ ಬಿಜೆಪಿಯಾಗಿದೆ. ಜನರ ಅಭಿಪ್ರಾಯಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಧ್ಯೇಯ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ತಮ್ಮ ಸರ್ಕಾರದ ಕಾರ್ಯವೈಖರಿ ನಿರ್ದೇಶಿಸಬೇಕಿದೆ ಎಂದರು.
ನಟಿ ತಾರಾ ಮಾತನಾಡಿ, ಅರವಿಂದ ಲಿಂಬಾವಳಿ ಅವರು ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಚಿವರಾಗಿ ಶಾಸಕರಾಗಿ ಅವರು ಮಾಡಿರುವ ಸೇವೆ ಆಮೂಲ್ಯ. ಮತ್ತೂಮ್ಮೆ ಅವರು ಶಾಸಕರಾದರೆ ಬಿಜೆಪಿ ಸರ್ಕಾರ ರಚನೆಯಾದರೆ ಖಂಡಿತವಾಗಿಯೂ ಸಚಿವರಾಗುತ್ತಾರೆ.
ಇದರಿಂದ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಿದ ಏಕೈಕ ಪಕ್ಷ ಬಿಜೆಪಿಯಾಗಿದೆ. ಜನರ ಅಭಿಪ್ರಾಯಕೆಕ ಹೆಚ್ಚು ಒತ್ತು ನೀಡುವುದು ನಮ್ಮ ಧ್ಯೇಯ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸರ್ಕಾರದ ಕಾರ್ಯವೈಖರಿ ನಿರ್ದೇಶಿಸಬೇಕಿದೆ ಎಂದು ಹೇಳಿದರು.
ಮಹದೇವಪುರ ಕ್ಷೇತ್ರಕ್ಕೆ ಹಿಂದಿನ ಬಿಜೆೆಪಿ ಸರ್ಕಾರ 1400 ಕೋಟಿ ರೂ. ಅನುದಾನ ನೀಡುವ ಮೂಲಕ ಸಾಕಷ್ಟು ಅಭಿವೃದ್ಧಿ ಮಾಡಿತ್ತು. ಆದರೆ, ಕಾಂಗ್ರೆಸ್ ಅನುದಾದ ಒದಗಿಸುವಲ್ಲಿ ತಾರತಮ್ಯ ಮಾಡಿತು. ಕೇವಲ 780 ಕೋಟಿ ರೂ. ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿ ಕುಂಠಿತವಾಗುವಂತೆ ಮಾಡಿತು ಎಂದು ದೂರಿದರು.
ಕಾಡುಗುಡಿ ವಾರ್ಡ್‌ನ ಅಂಬೇಡ್ಕರ್ ನಗರ, ದಿನ್ನೂರು, ಮೈತ್ರಿ ಬಡಾವಣೆ, ಎಕೆಜಿ ಕಾಲೋನಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು. ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಮುಖಂಡರಾದ ಅಶ್ವಥ್‌ನಾರಾಯಣರೆಡ್ಡಿ, ವೀರಸ್ವಾಮಿರೆಡ್ಡಿ, ಟಿ.ಎನ್.ಶ್ರೀನಿವಾಸರೆಡ್ಡಿ, ಚನ್ನಸಂದ್ರ ಚಂದ್ರಶೇಖರ್, ಕಬಡ್ಡಿ ಪಿಳ್ಳಪ್ಪ, ಅಸ್ಲಂಪಾಷಾ, ಕೃಷ್ಣಮೂರ್ತಿ, ಪ್ರಶಾಂತ್, ದಿನ್ನೂರು ಲೋಕೇಶ್ ಉಪಸ್ಥಿತರಿದ್ದರು.