Advertisement

ಸೌಲಭ್ಯಕ್ಕಾಗಿ ಬೀದಿಗಿಳಿದ ಜನ

12:56 PM Nov 23, 2019 | Suhan S |

ಕೆರೂರ: ಕುಡಿಯುವ ನೀರು, ರಸ್ತೆ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಪಡೆಯಲು ಸ್ಥಳೀಯ ನಾಗರಿಕರು ಪರದಾಡಬೇಕಿದ್ದು, ಅಧಿ ಕಾರಿಗಳ ನಿರ್ಲ ಕ್ಷ್ಯ ಧೋರಣೆ ಖಂಡಿಸಿ ಜನತೆ ಬೀದಿಗಿಳಿದು ಪ್ರತಿಭಟಿಸಿದರು.

Advertisement

ಸಾಮಾಜಿಕ ಕಾರ್ಯಕರ್ತ ರಾಚಣ್ಣ ಕುದರಿ ಹಾಗೂ ಇನ್ನಿತರೆ ಮುಖಂಡರ ನೇತೃತ್ವದಲ್ಲಿ ಹೊಸಪೇಟೆ ಬಡಾವಣೆಯ ಬನಶಂಕರಿ ದೇವಾಲಯ ಆವರಣದಿಂದ ಆರಂಭಗೊಂಡ ಪ್ರತಿಭಟನೆ ಮೆರವಣಿಗೆಯಲ್ಲಿ ನೂರಾರು ನಾಗರಿಕರು, ಮಹಿಳೆಯರು ನಿತ್ಯದ ಬದುಕಿನಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿ ದೊರಕದೇ ತಾವು ಪಡುತ್ತಿರುವ ಪಾಡನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು.

ನೀರು ಪೂರೈಸಿ: ಉತ್ತಮ ಮಳೆ ಹಾಗೂ ಘಟಪ್ರಭೆಯ ಹಿನ್ನೀರಿನಿಂದ ಪಟ್ಟಣದ ಕೆರೆ ಭರ್ತಿಯಾಗಿದ್ದರೂ ಪಪಂ ಅಧಿ ಕಾರಿಗಳು ಜನತೆಗೆ ಅಗತ್ಯ ಪ್ರಮಾಣದ ನೀರು ಪೂರೈಸುವಲ್ಲಿ ವಿಫಲಾಗಿದ್ದಾರೆ. ಸ್ಥಳೀಯ ರಸ್ತೆ, ಚರಂಡಿಗಳು ತ್ಯಾಜ್ಯ, ಹೊಲಸಿನಿಂದ ತುಂಬಿ ತುಳುಕುತ್ತಿದ್ದರೂ ಸ್ವತ್ಛತೆಯ ನಿರ್ವಹಣೆ ಆಗುತ್ತಿಲ್ಲ. ಪಂಚಾಯ್ತಿಯಲ್ಲಿ ಉತಾರೆ, ಇತರೆ ದಾಖಲಾತಿ ಬೇಕಾದರೆ ನಾಗರಿಕರು ತಿಂಗಳಾನುಗಟ್ಟೆಲೆ ಅಲೆದಾಡುವ ಸ್ಥಿತಿ ಬಂದಿದೆ. ಜವಾಬ್ದಾರಿ ಉಳ್ಳ ಅಧಿಕಾರಿಗಳು ಎಲ್ಲ ಗೊತ್ತಿದ್ದರೂ ದಿವ್ಯ ನಿರ್ಲಕ್ಷ ವಹಿಸಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಉಪತಹಶೀಲ್ದಾರ್‌ ಕಚೇರಿಗೆ ತೆರಳಿದ ಅವರು, ಅಟಲಜೀ ಸ್ನೇಹಿ ಕೇಂದ್ರದ ಸೇವೆ ತುರ್ತಾಗಿ ಚಾಲನೆ ಮಾಡಬೇಕು. ರೈತರು, ನಾಗರಿಕರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು. ಈ ವೇಳೆ ಹಾಜರಿದ್ದ ಆಯಾ ಅಧಿಕಾರಿಗಳು ನಿಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಗೋಪಾಲ ಅಸೂಟಿ, ಉಮೇಶ ಗೌಡರ, ಸುರೇಶ ಸೂಳಿಕೇರಿ, ಮಲ್ಲಪ್ಪ ಹವೇಲಿ, ಈರಪ್ಪ ಅಂಕದ, ಜಾನಕಿಬಾಯಿ ಪರದೇಶಿ, ಸುವರ್ಣವ್ವ ಅಂಕದ, ಲಕ್ಷ್ಮೀ ಕುದರಿ, ಪಿತಾಂಬ್ರೆವ್ವ ಕುದರಿ, ಲಲಿತವ್ವ ದಂಡಾವತಿ, ಜಯಶ್ರೀ ಬಡಣ್ಣವರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next