Advertisement

ನದಿ ಪಾತ್ರದ ಜನ ಜಾಗರೂಕರಾಗಿ

06:10 PM Aug 16, 2022 | Shwetha M |

ಆಲಮೇಲ: ಮಹಾರಾಷ್ಟ್ರದ ಭೀಮಾ ನದಿ ಪಾತ್ರದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ನದಿಗೆ ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನದಿ ಪಾತ್ರದ ಜನರು ಜಾಗರೂಕರಾಗಿ ಇರಬೇಕು ಎಂದು ತಹಶೀಲ್ದಾರ್‌ ಸುರೇಶ ಚವಲರ ಹೇಳಿದರು.

Advertisement

ದೇವಣಗಾಂವ ಗ್ರಾಪಂ ಸಭಾಭವನದಲ್ಲಿ ವಿಪತ್ತು ನಿರ್ವಹಣಾ ಸಭೆ ನಡೆಸಿ ಮಾತನಾಡಿದ ಅವರು, ನದಿಗೆ ನೀರು ಹೆಚ್ಚಳವಾಗುವ ಸಂಭವ ಇರುವುದರಿಂದ ನದಿ ಪಾತ್ರದಲ್ಲಿ ಬರುವ ದೇವಣಗಾಂವ, ಬ್ಯಾಡಗಿಹಾಳ, ಶಂಬೇವಾಡ, ಕಡ್ಲೆàವಾಡ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಿ ನದಿಗೆ ಜನ ಜಾನುವಾರು ತೆರಳದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮದ ಪ್ರಮುಖರ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ನೀರಿನ ಪ್ರಮಾಣ, ಜನ, ಜಾನುವಾರು ಜೀವ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕಿದ್ದು ತಾವು ಸಹಕಾರ ನೀಡಬೇಕೆಂದರು.

ಜಿಲ್ಲಾ ನೋಡಲ್‌ ಅಧಿಕಾರಿ ಸಿ.ಎಸ್‌. ನಿಂಬಾಳ್ಕರ, ಆರ್‌ಒ ಎಂ.ಎ. ಅತ್ತಾರ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪುರ, ಉಪಾಧ್ಯಕ್ಷೆ ರೂಪಾ ನಂದಿ, ಪಿಡಿಒ ಶರಣಗೌಡ ಕಡ್ಲೆವಾಡ, ಹಿರಿಯರಾದ ಈರಣ್ಣ ಮಾಸ್ತರ ಕಲಶೆಟ್ಟಿ, ಗ್ರಾಪಂ ಸದಸ್ಯ ದವಲಪ್ಪ ಸೊನ್ನ, ಮುತ್ತುರಾಜ ಕಲಶೆಟ್ಟಿ, ಸಿದ್ದಾರ್ಥ ಮೇಲಿನಕೇರಿ, ದೇವೇಂದ್ರ ದೊಡ್ಡಮನಿ, ನಿಂಗಪ್ಪ ಅಳ್ಳಗಿ, ರಮೇಶ ಸೊಡ್ಡಿ, ಶಂಕರಲಿಂಗ ನಡುವಿನಕೇರಿ, ರಮೇಶ ದೇವಣಗಾಂವ, ಪುಂಡಲೀಕ ನಡುವಿನಕೇರಿ, ಗನಿ ನಾಗಾವಿ, ಸುರೇಶ ಗಂಗನಳ್ಳಿ, ಮುನೀರ ಮುಜಾವರ, ಅನಿಲ ಸಿಂದಗಿ, ಖಾಜು ಕಾಂಬಳೆ, ಆರೊಗ್ಯ ಇಲಾಖೆಯ ಎಸ್‌.ಐ. ಕಲಶೆಟ್ಟಿ, ಶಿಕ್ಷಕ ಬಿ.ಬಿ. ಸಿಂಪಿ, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ ಕಾಂಬಳೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next