Advertisement

ಉದ್ಯಾನದಲ್ಲೇ ಚರಗ ಚಲ್ಲಿದ ಜನರು

09:38 AM Dec 19, 2017 | |

ಕಲಬುರಗಿ: ನಗರದಲ್ಲಿನ ಎಲ್ಲ ವಾರ್ಡ್‌ಗಳು ಹಾಗೂ ಹೊಲ ಇಲ್ಲದವರು ಹೈಕೋರ್ಟ್‌ ಪಕ್ಕದ ಅಕ್ಕಮಹಾದೇವಿ ಬಡಾವಣೆ, ಬುದ್ದವಿಹಾರ ಉದ್ಯಾನವನ, ಕೆಸರಟಗಿ, ಶರಣಬಸವೇಶ್ವರ ಕೆರೆ ಉದ್ಯಾನಗಳಿಗೆ ಹೋಗಿ ಭೋಜನ ಸವಿದು ಎಳ್ಳ ಅಮಾವಾಸ್ಯೆ ಆಚರಿಸಿದರು.

Advertisement

ಎಳ್ಳ ಅಮಾವಾಸ್ಯೆ ಪ್ರಮುಖ ಖಾದ್ಯ ನವಧಾನ್ಯಗಳು, ವಿವಿಧ ಹಸಿರು ಪಲ್ಲೆಗಳು ಸೇರಿಸಿ ಮಾಡಿದ ಭಜಿ ಪಲ್ಲೆ, ಸಜ್ಜೆ, ಜೋಳದ ರೊಟ್ಟಿ, ಶೇಂಗಾ, ಅಗಸಿ ಹಿಂಡಿ, ಎಣ್ಣೆ ಬದನೆಕಾಯಿ, ಜೋಳದ, ಸಜ್ಜಿ ಕಡುಬು, ಶೇಂಗಾ ಹೋಳಿಗೆ, ಹೋಳಿಗೆ ಸೇರಿದಂತೆ ವಿವಿಧ ಖಾದ್ಯ ಪದಾರ್ಥ ಸವಿದ ಹಿರಿಯರು ಹರಟೆ ಹೊಡೆದರೆ, ಮಕ್ಕಳಂತೂ ಜೋಕಾಲಿ, ಜಾರುಬಂಡೆ ಆಡಿ ಖುಷಿಪಟ್ಟರು. 

ಇದೇ ವೇಳೆ ಗ್ರಾಮೀಣ ಭಾಗದ ಜನರು ಮಾತ್ರ ತಮ್ಮ ಹೊಲಗಳಿಗೆ ಹೋಗಿ ಜೋಳದ, ತೊಗರಿ ಸೇರಿದಂತೆ ವಿವಿಧ ಬೆಳೆ ಹಸಿರು ಹಾಸಿನಲ್ಲಿ ಓಡಾಡಿ ಚೆರಗ ಚೆಲ್ಲಿ ಸಂಭ್ರಮಿಸಿದರು. ತಾವು ತಯಾರು ಮಾಡಿದ ಖಾದ್ಯವನ್ನು ಬಂಧು, ಬಳಗದವರೊಂದಿಗೆ ಉಂಡು ಮನೆಗಳಿಗೆ ಮರಳಿದರು.

ಚರಗ ಭೂತಾಯಿ ನೈವೇದ್ಯ ರೈತ ವರ್ಷಪೂರ್ತಿ ದುಡಿದು ಉತ್ಪನ್ನ ಮಾಡುವ ಕಾಳುಗಳು, ಹಸಿರು ಪಲ್ಲೆಗಳು ಸೇರಿದಂತೆ ವಿವಿಧ ತರಕಾರಿಯಿಂದ ಮಾಡುವ ಭಜಿ ಪಲ್ಲೆ ಮತ್ತು ಇತರೆ ಖಾದ್ಯವನ್ನು ಭಕ್ತಿಯಿಂದ ಭೂಮಿ ತಾಯಿಗೆ ಅರ್ಪಿಸುವಾಗ ಇಡೀ ಹೊಲದ ನಾಲ್ಕು ಮೂಲೆಗಳಿಗೆ ಚೆಲ್ಲಿ ಭೂಮಿ ತಾಯಿಗೆ ನಮಿಸುತ್ತಾನೆ. ಆತನ ಇಡೀ ಕುಟುಂಬ ಚಾಂಗ ಬೋಲೋ.. ಚಕ್ಕಡಿ ಹೊಡಿರೋ ಎನ್ನುತ್ತಾರೆ. 

ಇದನ್ನೇ ಚರಗ ಹೊಡೆಯುವುದು ಎನ್ನಲಾಗುತ್ತದೆ.  ಸುವರ್ಣಾ ಶರಣಪ್ಪ ದೇಸಾಯಿ, ನಗರದ ಗೃಹಿಣಿ ಹಳ್ಳಿ ಸೊಗಡಿಲ ಹೌದು.. ಏನು ಮಾಡೋದು. ನಮಗೆ ಹಳ್ಳಿ ಸೊಗಡಿನ ಸಂಭ್ರವಿಲ್ಲ. ಆಟೋಗಳಲ್ಲಿ ಉದ್ಯಾನಗಳಿಗೆ ಬಂದು ಇಳಿತೇವೆ.. ಹುಲ್ಲು ಹಾಸಿನಲ್ಲಿ ಉಣ್ಣುವುದೇ ಎಳ್ಳ  ಮಾವಾಸ್ಯೆಯಾಗಿದೆ. ದನಗಳ ಗೆಜ್ಜೆ ಸದ್ದಿಲ್ಲ. ಯಕ್ಕಾ.. ಬಾರೇ. ಜಲ್ದಿ ಹೋಗೋನು ಎನ್ನುವ ದೊಡ್ಡ ಧ್ವನಿಗಳಿಲ್ಲ. ಗೇನಿದ್ದರೂ ಇಂಟರನೆಟ್‌.. ವ್ಯಾಟ್ಸ್‌ ಆ್ಯಫ್‌, ಫೇಸ್‌ಬುಕ್‌ ಎಳ್ಳಾಮಾಸ್ಯೆ. ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ಹಾಕಿಕೊಂಡು ಲೈಕು, ಕಾಮೆಂಟು.. ಅದಕ್ಕೊಂದಿಷ್ಟು ಪರ ವಿರೋಧ ಮಾತುಗಳಿಗೆ ಸೀಮಿತವಾಗಿದೆ. ಹಳ್ಳಿ ರೈತರ ಖುಷಿ ನಮಗೆ ಸಿಗುತ್ತಿಲ್ಲ.. ಹೊಲಗಳಿದ್ದವರು ಹೋಗ್ತಾರೆ. ನಾವೆಲ್ಲಿ ಹೋಗಬೇಕು?
 ಮಹೇಶ ತಳಕೇರಿ, ಕಲಬುರಗಿ ನಿವಾಸಿ

Advertisement

ಸೂರ್ಯಕಾಂತ ಎಂ. ಜಮಾದಾರ 

Advertisement

Udayavani is now on Telegram. Click here to join our channel and stay updated with the latest news.

Next