Advertisement

ಸಾಮಗ್ರಿ ಖರೀದಿಗೆ ದಾಂಗುಡಿ

04:02 PM Mar 27, 2020 | Suhan S |

ಬೀದರ: ಕೋವಿಡ್ 19 ನಿಯಂತ್ರಿಸಲು ಕೇಂದ್ರ ಸರ್ಕಾರ ಹೇರಿರುವ ಇಡೀ “ಭಾರತ ಲಾಕ್‌ಡೌನ್‌’ಗೆ ಗುರುವಾರ ಎರಡನೇ ದಿನವಾಗಿದ್ದು, ಗಡಿ ಜಿಲ್ಲೆ ಬೀದರನಲ್ಲಿ ಕರ್ಫ್ಯೂ ಮುಂದುವರಿದಿದೆ. ಅವಶ್ಯಕ ವಸ್ತುಗಳ ಖರೀದಿಗೆ ನಿರ್ಬಂಧ ಸಡಿಲ ಗೊಳಿಸಿದ್ದು, ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವವರಿಗೆ ಪೊಲೀಸರು ಬೆತ್ತದ ರುಚಿ ತೋರಿಸುತ್ತಿದ್ದಾರೆ.

Advertisement

ಕರ್ಫ್ಯೂ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಬಂಧದಂತೆ ಎಲ್ಲ ಬಗೆಯ ಉದ್ಯಮಗಳು ಬಂದ್‌ ಆಗಿವೆ. ಆದರೆ, ಜೀವನೋಪಾಯಕ್ಕೆ ಅವಶ್ಯಕವಾಗಿರುವ ಸಾಮಗ್ರಿಗಳು ಅಂಗಡಿ ಮತ್ತು ತರಕಾರಿ ಮಾರಾಟಕ್ಕೆ ವಿನಾಯಿತಿ ನೀಡಿದ್ದರಿಂದ ಖರೀದಿಗಾಗಿ ಜನಜಂಗುಳಿಯೇ ಸೇರುತ್ತಿತ್ತು. ಮಾಸ್ಕ್ ಧರಿಸುವುದು ಸೇರಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದಿರುವುದು ಸೋಂಕಿನ ಆತಂಕ ಹೆಚ್ಚಿಸಿದ್ದರು. ಇದರಿಂದ ಎಚ್ಚೆತ್ತ ಆಡಳಿತ ಆಹಾರ ಪದಾರ್ಥ ಮತ್ತು ತರಕಾರಿ ವ್ಯಾಪಾರಕ್ಕೆ ನಿಯಮಗಳನ್ನು ಸಡಿಲಗೊಳಿಸಿ ಬೆಳಿಗ್ಗೆ ಮತ್ತು ಸಂಜೆ ಸಮಯ ನಿಗದಿ ಮಾಡಿದೆ. ಅದರಂತೆ ಸಾರ್ವಜನಿಕರು ಸಮಯದಲ್ಲೇ ಖರೀದಿ ಮಾಡುತ್ತಿದ್ದಾರೆ.

ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದಿಸೆಯಲ್ಲಿ ಅಂಗಡಿಗಳ ಎದುರು ನಗರಸಭೆ/ಪುರಸಭೆ ಮೂಲಕ ಗುರುತು ಹಾಕಲಾಗಿದ್ದು, ಇದರಿಂದ ಸರತಿಯಂತೆ ನಿಂತು ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಆದರೆ, ಗಾಂಧಿ ಗಂಜ್‌ನಂಥ ಹೆಚ್ಚುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಇದಕ್ಕೆ ಸಾರ್ವಜನಿಕರು ಸ್ಪಂದಿಸದೇ ತಣ್ಣೀರು ಎರಚುವ ಪ್ರಯತ್ನ ಮಾಡುತ್ತಿದ್ದಾರೆ. ಅಂಗಡಿ ಮುಂಗಟ್ಟು ಬಂದ್‌, ವಾಹನಗಳ ಸಂಚಾರ ಹೊರತುಪಡಿಸಿದರೆ ಜನರು ನಿರ್ಭಯವಾಗಿ ಓಡಾಡುವುದು ಮುಂದುವರಿಸಿದ್ದಾರೆ. ಪೊಲೀಸರು ಮನವಿ ಮಾಡಿದರೂ ಜನ ಕ್ಯಾರೆ ಎನ್ನದಿದ್ದಾಗ ಕೊನೆಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ನಿತ್ಯ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ 550 ಬಸ್‌ ಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next