ಕೆ.ಆರ್.ಪುರ: ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಬೇಸತ್ತಿರುವ ಮತದಾರರು ಪ್ರಾದೇಶಿಕ ಪಕ್ಷ ಜೆಡಿಎಸ್‌ನತ್ತ ಒಲವು ತೋರುತ್ತಿದ್ದಾರೆ ಎಂದು ಕೆಆರ್‌ಪುರ ವಿಧಾನಸಬಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಎ.ಗೋಪಾಲ್ ತಿಳಿಸಿದರು. ಬಸವನಪುರ ವಾರ್ಡ್ ಮೇಡಹಳ್ಳಿಯಲ್ಲಿನ ವಿನಾಯಕಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದಿಂದ ಬಿರುಸಿನ ಪ್ರಚಾರ ಕೈಗೊಂಡ ಅವರು ದ್ವಿಚಕ್ರ ವಾಹನದಲ್ಲಿ ವಿವಿಧಡೆ ಸಂಚರಿಸಿ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ರಾಷ್ಟ್ರೀಯ ಪಕ್ಷಗಳು ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿರುವ ಜನರು ಬದಲಾವಣೆ ಬಯಸಿದ್ದಾರೆ, ಪ್ರಾದೇಶಿಕ ಜೆಡಿಎಸ್ ಪಕ್ಷಕ್ಕೆ ಈ ಬಾರಿ ಅಶೀರ್ವಾದ ಮಾಡಲಿದ್ದಾರೆ ಎಂದು ನುಡಿದರು.
2008ರಲ್ಲಿ ರೈತರ ಹೆಸರಲ್ಲಿ ಅಧಿಕಾರ ಬಂದ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿಗಿಂತ ಭ್ರಷ್ಟಾಚಾರ ಮೇಲುಗೈ ಸಾಧಿಸಿದೆ. ಸಿಎಂ ಸೇರಿದಂತೆ ಅನೇಕ ಬಿಜೆಪಿ ನಾಯಕರು ಜೈಲು ಸೇರಿ ಮುಖ್ಯಮಂತ್ರಿ ಹುದ್ದೆಗೆ ಅಪಖ್ಯಾತಿ ತಂದಿದ್ದರು. ಕೇಂದ್ರ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಪ್ರತಿಯೊಂದನ್ನು ಜಿಎಸ್‌ಟಿ ತೆರಿಗೆ ವಿಧಿಸಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರುವಂತೆ ಮಾಡಿ ಜನಸಾಮಾನ್ಯರ ತೊಂದರೆಗೀಡಾಗುವಂತೆ ಮಾಡಿದೆ ಎಂದು ದೂರಿದರು.
ಕೆ.ಆರ್.ಪುರ ಕ್ಷೇತ್ರಕ್ಕೆ ಈವರೆಗೂ 2700ಕೋಟಿ ಅನುದಾನ ಬಂದಿದರೂ ಸಹ ಅಸ್ಪತ್ರೆ, ಡಿಪೋ ಕಾಲೇಜು, ಐಐಟಿ ಕಾಲೇಜು ಸರ್ಕಾರಿ ಶಾಲೆಗಳ ಕೆರೆ ಅಭಿವೃದ್ಧಿಯಂತಹ ಶಾಶ್ವತ ಅಭಿವೃದ್ಧಿ ಕಾರ್ಯಗಳ ಆಗಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 20 ಕಾಲಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಪೂರಕ ಯೋಜನೆಗಳ ಜನರ ಮನಮಾಸದಲ್ಲಿ ಇಂದಿಗೂ ಮಾಸಿಲ್ಲ, ಜೆಡಿಎಸ್ ಕಾಲದ ಅಭಿವೃದ್ಧಿ ಶ್ರೀ ರಕ್ಷಯಾಗಲಿದೆ ಎಂದು ಹೇಳಿದರು.
ಬಸವನಪುರ ವಾರ್ಡ್‌ನ ಮೇಡಹಳ್ಳಿ, ಸೀಗೆಹಳ್ಳಿ, ದೊಡ್ಡ ಬಸವನಪುರ, ಸ್ವತಂತ್ರ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮತದಾರರಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.